Advertisement

ರಾಯಚೂರು: ಬಾವಿಗೆ ಬಿದ್ದು ಯುವಕ ಸಾವು

01:04 PM Apr 10, 2022 | Team Udayavani |

ರಾಯಚೂರು: ಸಮೀಪದ ಯರಮರಸ್ ನಲ್ಲಿ ಬಾವಿಗೆ ಯುವಕನೋರ್ವ ಬಿದ್ದು ಮೃತಪಟ್ಟ ಘಟನೆ ನಡೆದಿದೆ.

Advertisement

ಮೃತ ಯುವಕನನ್ನು ಡಿ.ಪಾಂಡು ( 27) ಎಂದು ಗುರುತಿಸಲಾಗಿದೆ. ಬಾವಿಯಲ್ಲಿದ್ದ ಜಲಚರಗಳಿಗೆ ಆಹಾರ ನೀಡುವ ಹವ್ಯಾಸ ಹೊಂದಿದ್ದ ಪಾಂಡು ಶನಿವಾರ ಕಾಲು ಜಾರಿ ಬಾವಿಗೆ ಬಿದ್ದಿರಬಹುದು ಎಂದು ಶಂಕಿಸಲಾಗಿದೆ.

ಇದನ್ನೂ ಓದಿ:ಮಾಂಗಲ್ಯ ಸರ ಕದ್ದು ಮಣ್ಣಿನಲ್ಲಿ ಹೂತಿದ್ದ ಕಳ್ಳನನ್ನು 24 ಗಂಟೆಯೊಳಗೆ ಪತ್ತೆ ಹಚ್ಚಿದ ಪೊಲೀಸರು

ಈಜು ಬಾರದ ಕಾರಣ ಬಾವಿಯಲ್ಲಿ ಬಿದ್ದು ಮೃತಪಟ್ಟಿದ್ದಾನೆ ಎನ್ನಲಾಗಿದೆ. ರವಿವಾರ ಬೆಳಗ್ಗೆ ಶವ ಮೇಲೆ ಬಂದಿದ್ದು, ಘಟನೆ ಬೆಳಕಿಗೆ ಬಂದಿದೆ. ಗ್ರಾಮೀಣ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಶವ ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next