Advertisement

ಟೆರೇಸ್ ನಿಂದ ಬಿದ್ದು ಕೇಪುವಿನ ಯುವಕ ಸಾವು

01:16 PM Dec 24, 2020 | keerthan |

ವಿಟ್ಲ: ಯುವಕನೊಬ್ಬ ಟೆರೇಸ್ ನಿಂದ ಬಿದ್ದು ಮೃತಪಟ್ಟ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕೇಪು ಗ್ರಾಮದಲ್ಲಿ ನಡೆದಿದೆ.

Advertisement

ಬೆಳ್ತಂಗಡಿ ನಿವಾಸಿ ಪ್ರಸಾದ್ ಆಚಾರ್ಯ(28)  ಮೃತಪಟ್ಟವರು. ಅವರು ಕೇಪು ಕುಕ್ಕೆಬೆಟ್ಟುವಿನಲ್ಲಿ ಸಂಬಂಧಿಕರ ಮನೆಯಲ್ಲಿ ಚಿನ್ನದ ಕೆಲಸವನ್ನು ಮಾಡುತ್ತಿದ್ದರು.

ಬುಧವಾರ ತಡರಾತ್ರಿ ಟೆರೇಸ್ ನಿಂದ ಬಿದ್ದಿದ್ದಾರೆ. ತತ್ ಕ್ಷಣ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ವಿಟ್ಲದ ಕಡೆಗೆ ಬರುತ್ತಿದ್ದಾಗ ದಾರಿ ಮಧ್ಯೆ ಸಾವನ್ನಪ್ಪಿದರು.

ಇದನ್ನೂ ಓದಿ:ಯು.ಟಿ.ಖಾದರ್ ಕಾರು ಬೆನ್ನಟ್ಟಿದ ಪ್ರಕರಣ: ಓರ್ವ ಶಂಕಿತ ಪೊಲೀಸ್ ವಶಕ್ಕೆ

ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ದೇರಳಕಟ್ಟೆ ಆಸ್ಪತ್ರೆಗೆ ಕೊಂಡೊಯ್ಯಲಾಗಿತ್ತು.  ವಿಟ್ಲ ಪೋಲೀಸರು ಈ ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next