ಪಣಂಬೂರು: ಮಂಗಳೂರಿನ ಕೂಳೂರು ನದಿಗೆ ವ್ಯಕ್ತಿಯೋರ್ವ ನದಿಗೆ ಹಾರಿರುವ ಬಗ್ಗೆ ಮಾಹಿತಿ ದೊರೆತ ಹಿನ್ನಲೆ ಶೋಧ ಕಾರ್ಯಾಚರಣೆಗೆ ಸಿದ್ದತೆ ನಡೆಸಲಾಗುತ್ತಿದೆ.
ನದಿಗೆ ವ್ಯಕ್ತಿಯೋರ್ವ ಹಾರಿರುವ ಬಗ್ಗೆ ದಾರಿಹೋಕರು ಪೊಲೀಸರು ಮಾಹಿತಿ ನೀಡಿದ್ದು, ಸ್ಥಳಕ್ಕೆ ಕಾವೂರು ಮತ್ತು ಪಣಂಬೂರು ಪೊಲೀಸರು ಆಗಮಿಸಿದ್ದಾರೆ.
ನದಿಗೆ ಹಾರಿರುವ ವ್ಯಕ್ತಿಯ ಬಗ್ಗೆ ಯಾವುದೇ ಮಾಹಿತಿ ಇದುವರೆಗೆ ಲಭ್ಯವಾಗಿಲ್ಲ. ಮಾಹಿತಿ ನೀಡಿದವರೂ ಸ್ಥಳದಿಂದ ತೆರಳಿದ್ದಾರೆ. ಪೊಲೀಸರು ಸ್ಥಳಕ್ಕಾಗಮಿಸಿ ಅಗ್ನಿಶಾಮಕ ದಳ, ಈಜುಗಾರರಿಗೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಕಾಪು ತಾಲೂಕು ಪಂಚಾಯತ್ ಅಧ್ಯಕ್ಷರಾಗಿ ಬಿಜೆಪಿಯ ಶಶಿಪ್ರಭಾ ಅವಿರೋಧ ಆಯ್ಕೆ
ಸ್ಥಳಕ್ಕೆ ಕಾವೂರು ಸಿಐ ರಾಘವ್ ಪಡೀಲ್ ,ಪಣಂಬೂರು ಸಿಐ ಹಜ್ಮತ್ ಅಲೊ ಆಗಮಿಸಿ ತನಿಖೆ ನಡೆಸುತ್ತಿದ್ದಾರೆ.