Advertisement

ಫಿಟ್ಸ್ ಬಂದು ಆಸ್ಪತ್ರೆ ಮಹಡಿಯಿಂದ ಬಿದ್ದು ಯುವಕ ಸಾವು: ಸಿಸಿ ಕ್ಯಾಮರಾದಲ್ಲಿ ದೃಶ್ಯ ಸೆರೆ

05:50 PM Aug 06, 2020 | keerthan |

ಬೆಳಗಾವಿ: ತಂದೆಯೊಂದಿಗೆ ಆಸ್ಪತ್ರೆಗೆ ಹೋಗಿದ್ದ ಯುವಕನಿಗೆ ಫಿಟ್ಸ್ (ಮೂರ್ಛೆ) ಬಂದು ಮೂರನೇ ಮಹಡಿಯಿಂದ ಕೆಳಗಡೆ ಬಿದ್ದು ಮೃತಪಟ್ಟ ಘಟನೆ ಗುರುವಾರ ಮಧ್ಯಾಹ್ನ ಸಂಭವಿಸಿದೆ.

Advertisement

ಹಿಂಡಲಗಾದ ರೋಹನ್ ರಾಜು ಕುಪ್ಪೇಕರ ಎಂಬ ಯುವಕ ಕೆಳಗೆ ಬಿದ್ದು ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಕಡೋಲಕರ ಗಲ್ಲಿಯ ಆಸ್ಪತ್ರೆಯ ಮಹಡಿಯಿಂದ ಬಿದ್ದಿರುವ ಭಯಾನಕ‌ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಯುವಕ ಬೀಳುತ್ತಿದ್ದಂತೆ ಸ್ಥಳೀಯರು ಬಂದು ನೋಡುವಷ್ಟರಲ್ಲಿಯೇ ಸ್ಥಳದಲ್ಲಿಯೇ ಮೃತಪಟ್ಟಿದ್ದನು.

ಫಿಟ್ಸ್ ಸಮಸ್ಯೆ ಎಂದು ತಂದೆಯೊಂದಿಗೆ ರೋಹನ್ ಆಸ್ಪತ್ರೆಗೆ ಬಂದಿದ್ದನು. ರೋಹನ್ ಮೊಬೈಲ್ ನಲ್ಲಿ ಮಾತನಾಡುತ್ತ ಮಹಡಿ ಬಳಿ ನಿಂತಿದ್ದಾನೆ.‌ ಒಮ್ಮೆಲೆ‌ ಫಿಟ್ಸ್ ಬಂದು ತಲೆ ತಿರುಗಿ ಡ್ರಿಲ್ ಮೇಲಿನಿಂದ ಕೆಳಗೆ ಆಯಾ ತಪ್ಪಿ ಬಿದ್ದಿದ್ದಾನೆ. ಈತ‌ ಮೇಲಿನಿಂದ ಬಿದ್ದಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಈತನ ಆತ್ಮಹತ್ಯೆ ಅಲ್ಲ, ಫಿಟ್ಸ್ ಬಂದು ರೋಹನ್ ಮೃತಪಟ್ಟಿದ್ದಾನೆ ಎಂದು ಸಂಬಂಧಿಕರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next