Advertisement

ಗರ್ಭಿಣಿಗೆ ಸಹಾಯ; ರೈಲ್ವೆ ಫ್ಲ್ಯಾಟ್ ಫಾರಂ ಮೇಲೆ ರಿಕ್ಷಾ ಓಡಿಸಿದ ಚಾಲಕ! ಮುಂದೇನಾಯ್ತು

08:45 AM Aug 08, 2019 | Nagendra Trasi |

ಮುಂಬೈ:ಅವಧಿಗೂ ಮುನ್ನವೇ ಹೊಟ್ಟೆ ನೋವು ಕಾಣಿಸಿಕೊಂಡ ಮಹಿಳೆಗೆ ನೆರವು ನೀಡುವ ನಿಟ್ಟಿನಲ್ಲಿ ಆಟೋ ಚಾಲಕರೊಬ್ಬರು ರಿಕ್ಷಾವನ್ನು ರೈಲ್ವೆ ನಿಲ್ದಾಣದ ಫ್ಲ್ಯಾಟ್ ಫಾರಂ ಮೇಲೆ ಚಲಾಯಿಸಿಕೊಂಡು ಹೋದ ಘಟನೆ ಮುಂಬೈನ ವಿರಾರ್ ನಲ್ಲಿ ನಡೆದಿದೆ.

Advertisement

ಮಾನವೀಯತೆ ನೆಲೆಯಲ್ಲಿ ಮಹಿಳೆಯ ನೆರವಿಗೆ ಧಾವಿಸಿದ ವ್ಯಕ್ತಿ ವಿರಾರ್ ನ ಧೋಂಗ್ರಾಪಾದಾ ನಿವಾಸಿ ಸಾಗರ್ ಕಮಲಾಕರ್ ಗಾವಾಡ್(34ವರ್ಷ) ಎಂದು ಗುರುತಿಸಲಾಗಿದೆ.

ಏನಿದು ಘಟನೆ:

ಪೊಲೀಸರ ಮಾಹಿತಿ ಪ್ರಕಾರ, ಭಾನುವಾರ ಬೆಳಗ್ಗೆ ವಿಕಲಚೇತನರಿಗಾಗಿ ಕಾಯ್ದಿರಿಸಿದ್ದ ಕಂಪಾರ್ಟ್ ಮೆಂಟ್ ನಲ್ಲಿ ಏಳು ತಿಂಗಳ ಗರ್ಭಿಣಿ ಮತ್ತು ಪತಿ ರೈಲಿನಲ್ಲಿ ಕುಳಿತಿದ್ದರು. ಏತನ್ಮಧ್ಯೆ ಭಾರೀ ಮಳೆಯಿಂದಾಗಿ ರೈಲು ಹೊರಡುವುದು ವಿಳಂಬವಾಗಿತ್ತು. ಈ ಸಂದರ್ಭದಲ್ಲಿ ಮಹಿಳೆಗೆ ದಿಢೀರನೆ ಹೆರಿಗೆ ನೋವು ಕಾಣಿಸಿಕೊಂಡಿತ್ತು ಎಂದು ತಿಳಿಸಿದ್ದಾರೆ.

ಪತ್ನಿಯ ಸ್ಥಿತಿ ಕಂಡು ಪತಿ ಗಾಬರಿಗೊಳಗಾಗಿ ರೈಲ್ವೆ ಕಂಪಾರ್ಟ್ ಮೆಂಟ್ ನಲ್ಲಿ ಸಹಾಯಕ್ಕಾಗಿ ಮನವಿ ಮಾಡಿಕೊಂಡಿದ್ದರು. ಆದರೆ ಯಾರು ನೆರವು ನೀಡಲಿಲ್ಲ, ಬಳಿಕ ರೈಲ್ವೆ ನಿಲ್ದಾಣದ ಬಲಭಾಗದಲ್ಲಿ ರಿಕ್ಷಾ ಚಾಲಕ ಗಾವಾಡ್ ನಿಂತಿರುವುದನ್ನು ಗಮನಿಸಿದ ಪತಿ, ಸಹಾಯ ಮಾಡುವಂತೆ ವಿನಂತಿಸಿಕೊಂಡಿದ್ದರು.

Advertisement

ಆಗ ಗಾವಾಡ್ ರಿಕ್ಷಾವನ್ನು ರೈಲ್ವೆ ಫ್ಲ್ಯಾಟ್ ಫಾರಂ ಮೇಲೆ ತಂದು ಗರ್ಭಿಣಿಯನ್ನು ಹಾಗೂ ಪತಿಯನ್ನು ವಿರಾರ್ ನಲ್ಲಿರುವ ಸಂಜೀವಿನಿ ಆಸ್ಪತ್ರೆಗೆ ತಂದು ದಾಖಲಿಸಿರುವುದಾಗಿ ಪೊಲೀಸ್ ಇನ್ಸ್ ಪೆಕ್ಟರ್ ಪ್ರವೀಣ್ ಕುಮಾರ್ ಪ್ರವೀಣ್ ಕುಮಾರ್ ಯಾದವ್ ತಿಳಿಸಿದ್ದಾರೆ.

ಮಹಿಳೆ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮನೀಡಿದ್ದು, ತಾಯಿ, ಮಗು ಆರೋಗ್ಯವಾಗಿರುವುದಾಗಿ ವರದಿ ತಿಳಿಸಿದೆ. ಬಳಿಕ ರೈಲ್ವೆ ಪ್ರೊಟೆಕ್ಷನ್ ಫೋರ್ಸ್ ಕಾನೂನನ್ನು ಉಲ್ಲಂಘಿಸಿದ್ದಕ್ಕೆ ರಿಕ್ಷಾ ಚಾಲಕ ಗಾವಾಡ್ ಅವರನ್ನು ಬಂಧಿಸಿದ್ದರು. ಸೋಮವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಧೀಶರು ಎಚ್ಚರಿಕೆ ನೀಡಿ ಜಾಮೀನಿನ ಮೇಲೆ ಬಿಡುಗಡೆ ಮಾಡಿರುವುದಾಗಿ ವರದಿ ವಿವರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next