Advertisement

Uppunda ಕಾಲು ಜಾರಿ ಬಾವಿಗೆ ಬಿದ್ದು ವ್ಯಕ್ತಿ ಸಾವು..!

09:47 PM Jul 10, 2024 | Team Udayavani |

ಉಪ್ಪುಂದ: ಬೈಂದೂರು ತಾಲೂಕಿನ ಬಡಾಕೆರೆ ಗ್ರಾಮದ ನಿವಾಸಿ ಕೃಷಿಕ ಮಂಜುನಾಥ ಶೇಟ್‌ (85) ತೋಟದಲ್ಲಿ ತೆಂಗಿನಕಾಯಿ ಹೆಕ್ಕಲು ಹೋದಾಗ ಆಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ಬಿದ್ದು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಬುಧವಾರ ಸಂಭವಿಸಿದೆ.

Advertisement

ಬುಧವಾರ ಬೆಳಗ್ಗೆ ಕಾಯಿಯನ್ನು ಹೆಕ್ಕಲು ಮನೆಯಿಂದ ಹೋಗಿದ್ದ ಅವರು ಬಹಳ ಸಮಯದ ವರೆಗೆ ಮನೆಗೆ ಬಾರದೆ ಇರುವುದನ್ನು ಗಮನಿಸಿದ ಮಗ ರಾಘವೇಂದ್ರ ಶೇಟ್‌ ತಂದೆಯನ್ನು ಹುಡುಕಿದಾಗ ಬಾವಿಯಲ್ಲಿ ತಂದೆ ಧರಿಸಿರುವ ಚಪ್ಪಲಿ ತೇಲುತ್ತಿರುವುದನ್ನು ಗಮನಿಸಿ ಬೈಂದೂರು ಅಗ್ನಿಶಾಮಕ ದಳದವರಿಗೆ ಮಾಹಿತಿ ನೀಡಿದ್ದಾರೆ.

ಅಗ್ನಿ ಶಾಮಕದಳದ ಸಿಬಂದಿ ಹುಡುಕಾಟ ನಡೆಸಿ ಮೃತ ಶರೀರ ಬಾವಿಯಿಂದ ಮೇಲಕ್ಕೆತ್ತಿದರು. ಬೈಂದೂರು ಠಾಣೆ ಠಾಣಾಧಿಕಾರಿ ತಿಮ್ಮೇಶ್‌ ಡಿ.ಎನ್‌. ಮತ್ತು ಸಿಬಂದಿ ಘಟನ ಸ್ಥಳಕ್ಕೆ ಆಗಮಿಸಿ ಮಹಜರು ನಡೆಸಿದರು.

ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next