Advertisement

Uppinangady ಮರದಿಂದ ಬಿದ್ದು ಗಾಯಗೊಂಡಿದ್ದ ವ್ಯಕ್ತಿ ಸಾವು

01:02 AM Aug 26, 2023 | Team Udayavani |

ಉಪ್ಪಿನಂಗಡಿ: ಹದಿನೈದು ದಿನಗಳ ಹಿಂದೆ ಮರದಿಂದ ಬಿದ್ದು ಗಾಯಗೊಂಡಿದ್ದ ಇಚ್ಲಂಪಾಡಿ ನಿವಾಸಿ ಸೋಮನಾಥ (47) ಅವರು ಚಿಕಿತ್ಸೆ ಫ‌ಲಕಾರಿಯಾಗದೆ ಸಾವನ್ನಪ್ಪಿದ ಘಟನೆ ನಡೆದಿದೆ.

Advertisement

ಇಚ್ಲಂಪಾಡಿ ಗ್ರಾಮದ ಮೊಂಟೆತಡ್ಕ ನಿವಾಸಿಯಾಗಿರುವ ಸೋಮನಾಥ ಅಗಸ್ಟ್‌ 7 ರಂದು ಗ್ರಾಮದ ಮಾನಡ್ಕ ಎಂಬಲ್ಲಿ ಕೂಲಿ ಕೆಲಸಕ್ಕೆಂದು ಹೋಗಿದ್ದ ವೇಳೆ ಮರದಗೆಲ್ಲು ಕಡಿಯುವಾಗ ಅಯತಪ್ಪಿ ಬಿದ್ದು ಗಾಯಗೊಂಡಿದ್ದರು. ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫ‌ಲಕಾರಿಯಾಗದೆ ಆಗಸ್ಟ್‌ 22ರಂದು ನಿಧನರಾಗಿದ್ದಾರೆ.

ಘಟನೆ ಬಗ್ಗೆ ಉಪ್ಪಿನಂಗಡಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next