Advertisement

ನಿಜಾಮುದ್ದೀನ್ ನಿಂದ ಬಂದ ಬೀದರ್ ವ್ಯಕ್ತಿ ಹೈದರಾಬಾದ್ ನಲ್ಲಿ ಸಾವು: ಆತಂಕದಲ್ಲಿ ಜನತೆ

09:08 AM Apr 03, 2020 | keerthan |

ಬೀದರ್: ದೆಹಲಿಯ ನಿಜಾಮುದ್ದೀನ್ ಮಸೀದಿಯಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ವಾಪಸ್ಸಾಗಿದ್ದ ಬೀದರ್ ನ ವ್ಯಕ್ತಿ ಹೈದರಾಬಾದ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದು, ಕೋವಿಡ್-19 ಪಾಸಿಟಿವ್‌ ನಿಂದಲೇ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ಜಿಲ್ಲಾಡಳಿತ ಅಧಿಕೃತವಾಗಿ ಘೊಷಣೆ ಮಾಡಬೇಕಿದೆ.

Advertisement

ದೆಹಲಿಯಿಂದ ಮಾ. 17 ರಂದು ವಾಪಸ್ಸಾಗಿದ್ದ 69 ವಯಸ್ಸಿನ ವ್ಯಕ್ತಿಯಲ್ಲಿ ತೀವ್ರ ಸ್ವರೂಪದ ಕೋವಿಡ್-19 ಸೋಂಕಿನ ಲಕ್ಷಣಗಳು ಕಂಡು ಬಂದಿದ್ದರಿಂದ ಆತನನ್ನು ಬ್ರಿಮ್ಸ್ ಐಸೋಲೇಶನ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ವ್ಯಕ್ತಿಯ ರಕ್ತ ಮತ್ತು ಗಂಟಲು ಮಾದರಿಯ ಎರಡು ಬಾರಿ ಪರೀಕ್ಷಾ ವರದಿಯಲ್ಲೂ ನೆಗೆಟಿವ್ ಬಂದಿತ್ತು.

ಹೆಚ್ಚಿನ ಚಿಕಿತ್ಸೆಗಾಗಿ ಹೈದ್ರಾಬಾದ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಬುಧವಾರ ರಾತ್ರಿಯೇ ಇತನ ಸಾವು ಆಗಿದ್ದು, ಮಧ್ಯರಾತ್ರಿ ಸುರಕ್ಷತಾ ಕ್ರಮಗಳನ್ನು ಅನುಸರಿಸಿ ಆತನ ಅಂತ್ಯಕ್ರಿಯೆ ಮಾಡಲಾಗಿದೆ.

ವ್ಯಕ್ತಿಯ ಸಾವು ಕೋವಿಡ್-19 ಸೋಂಕಿನಿಂದಲೇ ಆಗಿದೆಯೇ ಅಥವಾ ಇತರ ಬೇರೆ ಆರೋಗ್ಯದ ಕಾರಣಕ್ಕೆ ಮೃತಪಟ್ಟಿದ್ದಾನೆ ಎಂಬುದು ಜಿಲ್ಲಾಡಳಿತ ಇನ್ನೂ ದೃಢಪಡಿಸಬೇಕಿದೆ. ಒಂದು ವೇಳೆ ಕೋವಿಡ್-19 ದಿಂದ ಸಾವು ಸಂಭವಿಸಿದ್ದರೇ ಕರ್ನಾಟಕದಲ್ಲಿ ಜಮಾತ್‌ನಿಂದ ಎರಡನೇ ಸಾವಿನ ಪ್ರಕರಣ ಇದಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next