ಕಟಪಾಡಿ: ಉದ್ಯಾವರ ಪಾಪನಾಶಿನಿ ಹೊಳೆಯಲ್ಲಿ ಕಪ್ಪೆಚಿಪ್ಪು ಹಿಡಿಯುವ ಸಮಯ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಸಂಭವಿಸಿದೆ.
ಆಸ್ಟೀನ್ ಮಚಾದೋ (41) ಎಂಬವರು ಸಾವಿಗೀಡಾದ ವ್ಯಕ್ತಿಯಾಗಿದ್ದಾರೆ.
ನಾಟಕ, ಚಿತ್ರ ಕಲಾವಿದರಾಗಿದ್ದ ಮಚಾದೋ ಪೈಂಟಿಂಗ್ ವ್ರತ್ತಿ ಮಾಡಿಕೊಂಡಿದ್ದು, ಕಪ್ಪೆಚಿಪ್ಪು ಹಿಡಿಯಲೆಂದು ಜ.28ರಂದು ಮನೆಯಿಂದ ಉದ್ಯಾವರ ಗ್ರಾಮದ ಪಾಪನಾಶಿನಿ ಹೊಳೆಗೆ ಹೋಗಿದ್ದರು.
ತನ್ನ ಸ್ಕೂಟರನ್ನು ಹೊಳೆ ಬದಿಯಲ್ಲಿ ನಿಲ್ಲಿಸಿ ಹೊಳೆಗೆ ಇಳಿದಿದ್ದು, ವಾಪಾಸು ಮನೆಗೆ ಬಾರದೇ ಇದ್ದ ವೇಳೆ ಮನೆಯವರು ಹುಡುಕಾಟ ನಡೆಸಿದ್ದಾರೆ , ಹೊಳೆಯ ಸುತ್ತಮುತ್ತ ಎಲ್ಲಾ ಕಡೆ ಹುಡುಕಾಡಿದರೂ ಪತ್ತೆಯಾಗಿರಲಿಲ್ಲ, ಆದರೆ ಜ. 29 ರಂದು ಉದ್ಯಾವರ ಗ್ರಾಮದ ಸಂಪಿಗೆನಗರ ಬಬ್ಬರ್ಯಗುಡ್ಡೆಯ ಪಾಪನಾಶಿನಿ ಹೊಳೆಯಲ್ಲಿ ಆಸ್ಟೀನ್ ಮಚಾದೋ ಮೃತದೇಹ ಪತ್ತೆಯಾಗಿದೆ.
ಕಾಪು ಪೊಲೀಸ್ ಠಾಣಾ ವ್ಯಾಪ್ತಿಯ ಕಟಪಾಡಿ ಹೊರಠಾಣೆ ಪೊಲೀಸ್ ರು ಪರಿಶೀಲನೆ ನಡೆಸಿದ್ದಾರೆ.