Advertisement

‘ಸೋಂಕು ಬಂದಿದೆ’ಎಂದು‌ ಆಸ್ಪತ್ರೆಯಲ್ಲಿ ನಗುತ್ತ ಡ್ಯಾನ್ಸ್ ಮಾಡಿದ‌ ತಬ್ಲಿಘಿ ಶಂಕಿತ ವ್ಯಕ್ತಿ

09:09 AM Apr 06, 2020 | keerthan |

ಬೆಳಗಾವಿ: ಕೋವಿಡ್-19 ಮಹಾಮಾರಿಗೆ ಇಡೀ ಜಗತ್ತೇ ತಲ್ಲಣಿಸಿದ್ದು, ಬೆಳಗಾವಿಯಲ್ಲೂ ಮೂವರಿಗೆ ಸೋಂಕು ದೃಢವಾಗಿರುವಾಗ ದೆಹಲಿ ನಿಜಾಮುದ್ದೀನ್ ದಿಂದ ಬಂದ ಶಂಕಿತ ವ್ಯಕ್ತಿ ಜಿಲ್ಲಾಸ್ಪತ್ರೆಯ ಕ್ವಾರಂಟೈನ್ ನಲ್ಲಿ ‘ನಮಗೆ ಕೋವಿಡ್-19 ಸೋಂಕು ಬಂದಿದೆ’ ಎಂದು‌ ಹೇಳಿ ನಗುತ್ತ ಡ್ಯಾನ್ಸ್ ಮಾಡಿರುವುದು ಉದ್ಧಟತನ ಮೆರೆದಿದ್ದಾನೆ.

Advertisement

ಜಿಲ್ಲಾಸ್ಪತ್ರೆಯ ಮೊದಲನೇ ಮಹಡಿಯಲ್ಲಿ ಕೋವಿಡ್-19 ಸೋಂಕು ಶಂಕಿತರನ್ನು ಕ್ವಾರಂಟೈನ್ ನಲ್ಲಿ‌ ಇಡಲಾಗಿದೆ. ಒಬ್ಬ ಶಂಕಿತ ವಿಡಿಯೋ ಮಾಡುತ್ತಿರುವಾಗ ಇನ್ನೊಬ್ಬ ಬಂದು ಕೈ ಮುಗಿದು, ‘ನಮಗೆ ಕೋವಿಡ್-19 ಸೋಂಕು ಬಂದಿದೆ’ ಎನ್ನುತ್ತ ಡ್ಯಾನ್ಸ್ ಮಾಡಿದ್ದಾನೆ. ವಾರ್ ರೂಮ್ ನಲ್ಲಿಯೇ ಈ ತರಹದ ಶಂಕಿತ ವ್ಯಕ್ತಿಯ ವರ್ತನೆ ಜನಸಾಮಾನ್ಯರಿಗೆ ಬೇಸರ ತಂದಿದೆ.

ಕೋವಿಡ್-19 ಸೋಂಕು ಹರಡದಂತೆ ವೈದ್ಯರು ಹಗಲಿರುಳು ಶ್ರಮಿಸುತ್ತಿದ್ದಾರೆ.‌ಇಂಥದ್ದರಲ್ಲಿ ನಮಗೆ ಯಾವುದೇ  ಉಪಚಾರ ನೀಡುತ್ತಿಲ್ಲ.‌ ವೈದ್ಯರು ಆರೈಕೆ‌ ಮಾಡುತ್ತಿಲ್ಲ ಎಂದು ಕೆಲವರು ತಗಾದೆ ತೆಗೆದಿದ್ದಾರೆ.‌ ಮೂವರು ವ್ಯಕ್ತಿಗಳು ಸೋಂಕು ಪಾಸಿಟಿವ್ ಇದ್ದರೂ ಅವರಿಗೂ ಸರಿಯಾದ ಚಿಕಿತ್ಸೆ ಸಿಗುತ್ತಿಲ್ಲ ಎಂದು ಸುಳ್ಳು ಆರೋಪ ಮಾಡಿದ್ದಾರೆ.‌

Advertisement

Udayavani is now on Telegram. Click here to join our channel and stay updated with the latest news.

Next