Advertisement

ಹೇರ್ ಕಟ್ ಮಾಡುವಾಗ ಬಿಕ್ಕಿ ಬಿಕ್ಕಿ ಅತ್ತ ವ್ಯಕ್ತಿ: ಕಾರಣ ಗೊತ್ತಾದ್ರೆ ನೀವ್ ನಗೋದು ಪಕ್ಕಾ!

02:34 PM Apr 08, 2021 | Team Udayavani |

ನವದೆಹಲಿ : ಹೇರ್ ಕಟ್ ಮಾಡಿಸಿಕೊಳ್ಳಲು ಹೋದ ವ್ಯಕ್ತಿಯೊಬ್ಬ ಕ್ಷೌರದ ಅಂಗಡಿಯಲ್ಲಿ ಬಿಕ್ಕಿಬಿಕ್ಕಿ ಅತ್ತ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ತುಂಬಾನೇ ವೈರಲ್ ಆಗುತ್ತಿದೆ. ಅರೇ ಅವನೇನು ಚಿಕ್ಕ ಮಗುವಾ ಅಳೋದಕ್ಕೆ ಎಂದು ನೀವು ಯೋಚಿಸಬಹುದು. ಆದ್ರೆ ಆತನ ಅಳುವಿಗೆ ಕಾರಣ ಬೇರೆ ಇದೆ. ಹಾಗಾದ್ರೆ ಆ ಕಾರಣ ಯಾವುದು ಅಂದ್ರಾ ಮುಂದೆ ಓದಿ..

Advertisement

ಹೇಟ್ ಕಟ್ ಮಾಡಿಸುವಾಗ ಅಳುತ್ತಿರುವ ಈ ಆಸಾಮಿಯನ್ನು ನೋಡಿದ ಕ್ಷೌರಿಕ ತುಂಬಾನೆ ನಕ್ಕಿದ್ದಾನೆ. ತನ್ನ ಟವೆಲ್ ನಿಂದ ಕಣ್ಣು ಮುಚ್ಚಿಕೊಂಡು ಆ ವ್ಯಕ್ತಿಯು ಜೋರಾಗಿ ಅತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಆ ವ್ಯಕ್ತಿ ಅಳುವುದಕ್ಕೆ ಮುಖ್ಯ ಕಾರಣ, 2002ರಲ್ಲಿ ಬಿಡುಗಡೆಯಾದ ಬಾಲಿವುಡ್​ ಸಿನಿಮಾ ಹಮ್​ ತುಮಾರೆ ಹೇನ್​ ಸನಮ್​. ಕ್ಷೌರಿಕನ ಅಂಗಡಿಯಲ್ಲಿ ಹಮ್​ ತುಮಾರೆ ಹೇನ್​ ಸನಮ್ ಸಿನಿಮಾದ ಸಬ್​ ಕುಚ್​ ಭುಲಾ ದಿಯಾ ಹಾಡನ್ನು ಹಾಡಿದ್ದಾರೆ. ಈ ಹಾಡನ್ನು ಕೇಳಿ ತಡೆಯಲಾರದೆ ವ್ಯಕ್ತಿಯು ಅತ್ತಿದ್ದಾನೆ.

ಈ ವಿಡಿಯೋ ನೋಡಿದ ನೆಟ್ಟಿಗರು ಪಾಪ ಆ ವಕ್ತಿಗೆ ಬಹುಶ್ಯಃ  ಹುಡುಗಿ ಕೈಕೊಟ್ಟಿರಬೇಕು. ಅದನ್ನೇ ನೆನೆದು ಅಳುತ್ತಿರಬೇಕು ಎಂಬ ಕಾಮೆಂಟ್​ ಮಾಡುತ್ತಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next