Advertisement

125 ಕೆ.ಜಿ.ಮೂಟೆ ಹೊತ್ತು ಗೊಮ್ಮಟೇಶ್ವರನ ಬೆಟ್ಟ ಹತ್ತಿದ!  

05:56 PM Jul 10, 2023 | Team Udayavani |

ಚನ್ನರಾಯಪಟ್ಟಣ: ತಾಲೂಕಿನ ಶ್ರವಣಬೆಳಗೋಳದ ಪುರಾಣ ಪ್ರಸಿದ್ಧ ಗೊಮ್ಮಟೇಶ್ವರನ ಬೆಟ್ಟವನ್ನು 125 ಕೆ.ಜಿ.ಜೋಳದ ಚೀಲವನ್ನು ಬೆನ್ನ ಮೇಲೆ ಹೊತ್ತು ಹತ್ತುವ ಮೂಲಕ ಸಾಹಸಿ ಭಕ್ತನೋರ್ವ ನೋಡುಗರನ್ನು ಬೆರಗುಗೊಳಿಸಿದ್ದಾರೆ.

Advertisement

ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಹುನ್ನೂರು ಗ್ರಾಮದ ಹನಮಂತ ಪರಸಪ್ಪ ಸರಪಳ್ವಿ(43) ಸಾಹಸಿ ಭಕ್ತ.

ಮಠಕ್ಕೆ ಜೋಳ ಸಮರ್ಪಣೆ: ಬೆಟ್ಟದಲ್ಲಿನ 700 ಮೆಟ್ಟಿಲುಗಳನ್ನು ಕೇವಲ 41 ನಿಮಿಷಗಳಲ್ಲಿ 125 ಕೆ.ಜಿ.ಜೋಳದ ಚೀಲ ಹೊತ್ತು ಹತ್ತಿದ್ದಾರೆ. ಈ ಜೋಳವನ್ನು ಬೆಳಗೋಳದ ಗೊಮ್ಮಟೇಶ್ವರ ದಿಗಂಬರ ಜೈನ ಮಂದಿರ ಮಠಕ್ಕೆ ಸಮರ್ಪಿಸಿದ್ದಾರೆ. ಕೃಷಿಕನಾಗಿರುವ ಹನಮಂತ ಹಲವು ದಿನಗಳಿಂದ ಬೆಟ್ಟಕ್ಕೆ ಭಾರ ಹೊತ್ತು ಹತ್ತಬೇಕು ಎಂಬ ಮಹದಾಸೆ ಹೊಂದಿದ್ದು ಭಾನುವಾರ ಈಡೇರಿಸಿದ್ದಾರೆ. ಇವರ ಸಾಹಸಕ್ಕೆ ಸ್ನೇಹಿತರು, ಭಕ್ತರು, ಗೊಮ್ಮಟೇಶ್ವರನ ಸಮಿತಿಯವರು ಅಚ್ಚರಿಗೊಂಡಿದ್ದಾರೆ.

ಬೆಟ್ಟದ ಮೇಲಿನ ಆವರಣದಲ್ಲಿ ಸಾಹಸಿ ಹನಮಂತನನ್ನು ದೇವಾಲಯ ಭಕ್ತರು ಹಾಗೂ ಸಾರ್ವಜನಿಕರು ಸನ್ಮಾನಿಸಿದರು. 125 ಕೆ.ಜಿ. ಭಾರ ಹೊತ್ತು ಬಾಹುಬಲಿ ಬೆಟ್ಟ ಏರುವ ವೇಳೆಯಲ್ಲಿ ಉಮೇಶ, ಜೋತ್ಯಪ್ಪನವರ, ಸಿದ್ರಾಮ ಇಟ್ಟಿ, ಸೈದು ಕಡಪಟ್ಟಿ, ಹನಮಂತ ಜಕ್ಕನ್ನವರ್ವ, ಭುಜಬಲಿ ಪಟ್ಟನವರ್ವ, ಮುರಗಯ್ಯ, ಪಾಲಭಾವಿಮಠ, ರಾಜು ಕವಟಗ್ವಿ, ಅನಿಲ ಮಾದರ್ವ, ಅಭೀಷೇಕ ಸರಪಳ್ವಿ, ರಾಕೇಶ ಸರಪಳ್ವಿ, ಮಹಮ್ಮದ ಪೆಂಡಾರಿ ಮತ್ತಿತರರು ಉಪಸ್ಥಿತರಿದ್ದರು.

125 ಕೆ.ಜಿ.ಜೋಳದ ಚೀಲ ಹೊತ್ತು ನಮ್ಮ ರಾಜ್ಯದ ಅತೀ ಎತ್ತರದ ಬೆಟ್ಟ ಹತ್ತಬೇಕೆಂಬ ನನ್ನ ಜೀವನದ ಕನಸಿತ್ತು. ಆದ ಕಾರಣ ನನಗೆ ನೆನಪಾಗಿದ್ದು ಹಾಸನ ಜಿಲ್ಲೆಯ ಶ್ರವಣ ಬೆಳಗೋಳದ ಗೊಮ್ಮಟೇಶ್ವರನ ಬೆಟ್ಟ. ಈ ಬೆಟ್ಟ ಹತ್ತಿ ಕನಸನ್ನು ಈಡೇರಿಸಿಕೊಂಡಿದ್ದೇನೆ. ● ಹನಮಂತ ಪರಸಪ್ಪ ಸರಪಳ್ವಿ, ಹುನ್ನೂರು ನಿವಾಸಿ, ಸಾಹಸಿ

Advertisement
Advertisement

Udayavani is now on Telegram. Click here to join our channel and stay updated with the latest news.

Next