ಬೆಂಗಳೂರು: ಕೌಟುಂಬಿಕ ವಿಚಾರಕ್ಕೆ ಬೇಸತ್ತ ವ್ಯಕ್ತಿ ಯೊಬ್ಬರು ಸ್ಯಾನಿಟೈಸರ್ ಕುಡಿದು ಆತ್ಮಹತ್ಯೆಗೆ ಯತ್ನಿ ಸಿರುವ ಘಟನೆ ಬುಧವಾರ ಸಂಜೆ ವಿಧಾನಸೌಧ ಆವರಣದಲ್ಲಿ ನಡೆದಿದೆ.
ಜೆ.ಸಿ.ನಗರ ನಿವಾಸಿ ನಂದಕುಮಾರ್(55) ಆತ್ಮಹತ್ಯೆಗೆ ಯತ್ನಿಸಿದವರು. ಸ್ಯಾನಿಟೈಜರ್ ಕುಡಿದು ಅಸ್ವಸ್ಥರಾಗಿದ್ದ ಅವರನ್ನು ಬೌರಿಂಗ್ ಆಸ್ಪತ್ರೆಗೆ ದಾಖಲಿಸಿದ್ದು, ಪ್ರಾಣಾಪಾಯ ದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಟಿವಿ ಹಾಗೂ ಎಲೆಕ್ಟ್ರಾನಿಕ್ ಉಪಕರಣಗಳ ರಿಪೇರಿ ಕೆಲಸ ಮಾಡುವ ನಂದಕುಮಾರ್, ಮದ್ಯ ವ್ಯಸನಿ. ಈ ವಿಚಾರವಾಗಿ ಮನೆಯಲ್ಲಿ ಆಗಾಗ ಜಗಳ ನಡೆಯುತ್ತಿತ್ತು.
ಕೆಲ ದಿನಗಳ ಹಿಂದೆ ಪತ್ನಿ ಮತ್ತು ಮಕ್ಕಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಜೆ.ಸಿ.ನಗರ ಠಾಣೆಗೆ ದೂರು ನೀಡಿದ್ದರು. ನಂತರ ಪೊಲೀಸರು ಪತ್ನಿ,ಮಕ್ಕಳನ್ನು ಠಾಣೆಗೆ ಕರೆಸಿ ರಾಜಿ ಸಂಧಾನ ಮಾಡಿದ್ದರು.
ಇದನ್ನೂ ಓದಿ:- ಸಮಸ್ಯೆಗೆ ಸ್ಪಂದಿಸದ ನಗರ ಸಭೆ: ಮಳೆ ಬಂದಾಗ ಜೀವಭಯದಲ್ಲೆ ಕಾಲ ಕಳೆಯಬೇಕಾದ ದುಸ್ಥಿತಿ
ಆದರೂ ಮದ್ಯದ ಅಮಲಿನಲ್ಲಿ ಮನೆಯಲ್ಲಿ ಆಗಾಗ್ಗೆ ಜಗಳ ಮಾಡಿಕೊಳ್ಳುತ್ತಿದ್ದ ನಂದಕುಮಾರ್, ಪತ್ನಿ ಮತ್ತು ಮಕ್ಕಳ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ಒತ್ತಾಯಿಸಿ ಬುಧವಾರ ಸಂಜೆ ವಿಧಾನಸೌಧ ಆವರಣಕ್ಕೆ ಬಂದು ಸ್ಯಾನಿಟೈಸರ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಕೂಡಲೇ ಪೊಲೀಸರು ಆತನನ್ನು ಆ್ಯಂಬುಲೆನ್ಸ್ ಮೂಲದ ಬೌರಿಂಗ್ ಆಸ್ಪ ತ್ರೆಗೆ ಕಳುಹಿಸಿದ್ದಾರೆ. ಸದ್ಯ ಅಪಾಯದಿಂದ ಪಾರಾಗಿ ದ್ದಾನೆ ಎಂದು ಪೊಲೀಸರು ಹೇಳಿದರು.