Advertisement

ತನ್ನ ಸಿಬ್ಬಂದಿ ಮೇಲೆ ಮೇಲೆ ಮನಸಾರೆ ಹಲ್ಲೆ ನಡೆಸಿದ ಭದ್ರತಾ ಏಜೆನ್ಸಿ ಮಾಲಿಕ

09:21 AM Oct 16, 2019 | Hari Prasad |

ಬೆಂಗಳೂರು: ಖಾಸಗಿ ಸೆಕ್ಯುರಿಟಿ ಏಜೆನ್ಸಿಯಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿಗಳಿಬ್ಬರಿಗೆ ಆ ಸಂಸ್ಥೆಯ ಮಾಲಿಕ ಹಿಂಸಾತ್ಮಕವಾಗಿ ಥಳಿಸುತ್ತಿರುವ ವಿಡಿಯೋ ಒಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ತನ್ನ ಇಬ್ಬರು ಉದ್ಯೋಗಿಗಳನ್ನು ಹೀಗೆ ಹಿಂಸಿಸುತ್ತಿರುವ ವ್ಯಕ್ತಿಯನ್ನು ಖಾಸಗಿ ಸೆಕ್ಯುರಿಟಿ ಏಜೆನ್ಸಿಯೊಂದರ ಮಾಲಿಕ ಸಲೀಂ ಖಾನ್ ಎಂದು ತಿಳಿದುಬಂದಿದೆ.

Advertisement

ತನ್ನ ಇಬ್ಬರು ಉದ್ದೋಗಿಗಳಿಗೆ ಕಾಲಿನಿಂದ ತುಳಿಯುತ್ತಿರುವ ಮತ್ತು ಅವರ ಮೇಲೆ ನಿಂತಿರುವ ದೃಶ್ಯಗಳು ಈ ವಿಡಿಯೋದಲ್ಲಿ ದಾಖಲಾಗಿವೆ. ಈ ರೀತಿ ತನ್ನ ಉದ್ಯೋಗಿಗಳ ಮೇಲೆ ಸಲೀಂ ಖಾನ್ ಹಲ್ಲೆ ಮಾಡಲು ಕಾರಣಗಳೇನು ಎಂದು ಇದುವರೆಗೆ ತಿಳಿದುಬಂದಿಲ್ಲ.

ಈ ಘಟನೆಗೆ ಸಂಬಂಧಿಸಿದಂತೆ ನಗರದ ಹೆಚ್.ಎಸ್.ಆರ್. ಲೇಔಟ್ ಪೊಲೀಸ್ ಠಾಣೆಯಲ್ಲಿ ಸ್ವಯಂಪ್ರೇರಿತ ಪ್ರಕರಣವೊಂದನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಆಗ್ನೇಯ ವಲಯ ಡಿಸಿಪಿ ಇಶಾ ಪಂತ್ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಈ ಪ್ರಕರಣದಲ್ಲಿ ಒಟ್ಟು ಆರು ಜನರನ್ನು ಆರೋಪಿಗಳೆಂದು ಗುರುತಿಸಲಾಗಿದ್ದು ಆದರೆ ಇದುವರಗೆ ಇಬ್ಬರನ್ನು ಮಾತ್ರ ವಶಕ್ಕೆ ಪಡೆದುಕೊಳ್ಳಲಾಗಿದೆ, ಪ್ರಮುಖ ಆರೋಪಿ ಸಲೀಂ ಖಾನ್ ತಲೆ ಮರೆಸಿಕೊಂಡಿದ್ದಾನೆ. ಸದ್ಯಕ್ಕೆ ಈ ಕೃತ್ಯಕ್ಕೆ ಕಾರಣವೇನೆಂದು ತಿಳಿದುಬಂದಿಲ್ಲವಾದರೂ ಸಲೀಂ ಬಂಧನದ ಬಳಿಕ ಹೆಚ್ಚಿನ ಮಾಹಿತಿ ಸಿಗುವ ನಿರೀಕ್ಷೆ ಇದೆ ಎಂದು ಇಶಾ ಪಂತ್ ಅವರು ಹೇಳಿದ್ದಾರೆ.

ಹಲ್ಲೆಗೊಳಗಾದವರು ಅಸ್ಸಾಂ ಮೂಲದವರಾಗಿದ್ದು ಇವರೆಲ್ಲರೂ ಈ ಭದ್ರತಾ ಏಜೆನ್ಸಿಯಲ್ಲಿ ಭದ್ರತಾ ಸಿಬ್ಬಂದಿಗಳಾಗಿ ಕಾರ್ಯನಿರ್ವಹಿಸುತ್ತಿದ್ದರು ಎಂದು ತಿಳಿದುಬಂದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next