Advertisement

ತಲವಾರ್ ದಿಂದ ಕೇಕ್ ಕತ್ತರಿಸಿ ಜನ್ಮದಿನ ಆಚರಿಸಿಕೊಂಡ ಕೈ ಕಾರ್ಯಕರ್ತ ಅರೆಸ್ಟ್

02:54 PM May 04, 2020 | keerthan |

ಬೆಳಗಾವಿ: ಕಾಂಗ್ರೆಸ್ ಕಾರ್ಯಕರ್ತನೋರ್ವ ತನ್ನ ಜನ್ಮದಿನವನ್ನು ತಲವಾರ್ ದಿಂದ ಕೇಕ್ ಕತ್ತರಿಸಿ ಆಚರಿಸಿದ್ದಕ್ಕೆ‌ ಈತನನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.

Advertisement

ತಾಲೂಕಿನ ಪಂತ ಬಾಳೇಕುಂದ್ರಿ ಗ್ರಾಮದ ಪ್ರೇಮ ಅಶೋಕ ಕೋಲಕಾರ ಎಂಬಾತನ ವಿರುದ್ಧ ಪ್ರಕರಣ ದಾಖಲಾಗಿದೆ.

ತನ್ನ ಜನುಮದಿನ ಆಚರಿಸುವ ವೇಳೆ ತಲವಾರ್ ದಿಂದ ಕೇಕ್ ಕತ್ತರಿಸಿದ್ದನು. ಆಚರಣೆಯ ಫೋಟೊ ಹಾಗೂ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು ಎಂದು ಮಾರೀಹಾಳ ಠಾಣೆ ಇನ್ಸಪೆಕ್ಟರ್ ವಿಜಯಕುಮಾರ ಸಿನ್ನೂರ ತಿಳಿಸಿದ್ದಾರೆ.

ಸ್ವಯಂ‌ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿರುವ ಮಾರೀಹಾಳ ಪೊಲೀಸರು ವ್ಯಕ್ತಿಯನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ. ಈ ಕುರಿತು ಮಾರೀಹಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next