Advertisement

ಮಹಿಳೆಯ ಹೆಸರಿನ ನಕಲಿ ಖಾತೆಯಲ್ಲಿ ಅಶ್ಲೀಲ ವಿಡಿಯೋ ಹಂಚುತ್ತಿದ್ದ ಯುವಕ ಸೆರೆ

10:12 AM Feb 24, 2020 | keerthan |

ರಾಯಚೂರು: ಮಹಿಳೆಯ ಹೆಸರಲ್ಲಿ ನಕಲಿ ಫೇಸ್ ಬುಕ್ ಖಾತೆ ಸೃಷ್ಟಿಸಿ ಅಶ್ಲೀಲ ಫೋಟೋ ಮತ್ತು ವೀಡಿಯೊ ಹರಿಬಿಡುತ್ತಿದ್ದ ಆರೋಪಿಯನ್ನು ಸಿಇಎನ್ ಅಪರಾಧ ಠಾಣೆ ವಿಭಾಗದ ಪೊಲೀಸರು ಬಂಧಿಸಿದ್ದಾರೆ.

Advertisement

ದೇವದುರ್ಗ ತಾಲ್ಲೂಕಿನ ಮುರಕಿಗುಡ್ಡಾ ತಾಂಡಾ ನೀವಾಸಿ ಅಮರೇಶ್ ಬಂಧಿತ ಆರೋಪಿ. ಸಿರವಾರ ತಾಲ್ಲೂಕಿನ ಮಹಿಳೆಯ ಹೆಸರಲ್ಲಿ ನಕಲಿ ಫೇಸ್ ಬುಕ್ ಖಾತೆ ತೆರದಿದ್ದ.

ಅದರಲ್ಲಿ ಅಶ್ಲೀಲ ಪೋಟೋ, ವಿಡಿಯೋ ಅಪ್ಲೋಡ್ ಮಾಡುತ್ತಿದ್ದ. ಈ ಕುರಿತು ಸಿರವಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ನಡೆಸಿದ ಸಿಇಎನ್ ಠಾಣಾಧಿಕಾರಿ ರಾಜಕುಮಾರ ವಾಜಂತ್ರಿ, ಸಿಬ್ಬಂದಿಯಾದ ಚಂದ್ರಶೇಖರ ರೆಡ್ಡಿ, ಕರಿಬಸವ ನೇತೃತ್ವದ ತಂಡ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next