Advertisement

ಮುಂಬೈ ಟು ಮಂಗಳೂರು 2 ಕೋಟಿ ರೂ. ಹವಾಲಾ ಹಣ ಸಾಗಿಸುತ್ತಿದ್ದ ವ್ಯಕ್ತಿಯ ಬಂಧನ

12:13 PM Jun 09, 2022 | Team Udayavani |

ಕಾರವಾರ: ಟಿಕೆಟ್ ಇಲ್ಲದೆ ಪ್ರಯಾಣಿಸುತ್ತಿದ್ದ ಅಪರಿಚಿತ ವ್ಯಕ್ತಿಯಿಂದ 2 ಕೋಟಿ ರೂ. ಹಣವನ್ನು ರೈಲ್ವೆ ಪೊಲೀಸರು ಕಾರವಾರ ರೈಲು ನಿಲ್ದಾಣದಲ್ಲಿ ವಶಪಡಿಸಿಕೊಂಡಿದ್ದಾರೆ. ಅಲ್ಲದೆ ಆರೋಪಿಯನ್ನು ಬಂಧಿಸಲಾಗಿದೆ.

Advertisement

ರೈಲು ಸಂಖ್ಯೆ.12133 (CSMT-ಮಂಗಳೂರು ಜೆಎನ್ಎಕ್ಸ್‌ಪ್ರೆಸ್) ನಲ್ಲಿ ಟಿಕೆಟ್ ಇಲ್ಲದೆ ಪ್ರಯಾಣಿಸುತ್ತಿದ್ದ ಅಪರಿಚಿತ ವ್ಯಕ್ತಿಯಿಂದ ಎರಡು ಕೋಟಿ ರೂ.  ಭಾರತೀಯ ಕರೆನ್ಸಿ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಕೊಂಕಣ ರೈಲ್ವೆ ಸಾರ್ವಜನಿಕ ಸಂಪರ್ಕ ಅಧಿಕಾರಿ ಸುಧಾ ಕೃಷ್ಣಮೂರ್ತಿ ತಿಳಿಸಿದ್ದಾರೆ.

ಹಣ ಸಾಗಿಸುತ್ತಿದ್ದ ವ್ಯಕ್ತಿಯನ್ನು ರಾಜಸ್ಥಾನದ ಚೆನ್ ಸಿಂಗ್ ಯಾನೆ ಮನೋಹರ್ ಹೇಮ ಸಿಂಗ್ ( 22 ವರ್ಷ) ಎಂದು ಗುರುತಿಸಲಾಗಿದೆ.

ಅಪರಿಚಿತ ವ್ಯಕ್ತಿಯೊಬ್ಬರು ಬ್ಯಾಗ್‌ ನೊಂದಿಗೆ ಕೆಲವು ಅನುಮಾನಾಸ್ಪದ ವಸ್ತುಗಳನ್ನು ಹೊಂದಿದ್ದಾರೆಂದು ಬೇಲಾಪುರದಿಂದ ರೈಲ್ವೆ ಅಧಿಕಾರಿ ಹೆಚ್.ಕೆ.ಪ್ರಸನ್ನ ಕುಮಾರ್ ಲಿಖಿತ ಮಾಹಿತಿಯನ್ನು ಕಾರವಾರ ರೈಲ್ವೆ ಪೊಲೀಸರಿಗೆ ಸುಳಿವು ನೀಡಿದರು. ಈ ವ್ಯಕ್ತಿ ರೈಲ್ವೆ ಟಿಸಿ ಗಳಿಗೆ ಮಾಹಿತಿ ನೀಡಲು ಹಾಗೂ ಟಿಕೆಟ್ ತೋರಿಸಲು ನಿರಾಕರಿಸಿದ್ದ.

ಇದನ್ನೂ ಓದಿ:ರಾಷ್ಟ್ರ ರಾಜಧಾನಿಯಲ್ಲಿ ಗುರುವಾರವೂ ಅಗ್ನಿ ಅವಘಡ; 20ಕ್ಕೂ ಹೆಚ್ಚು ಜನರ ರಕ್ಷಣೆ

Advertisement

ಇದನ್ನು ಆಧರಿಸಿ ರೈಲ್ವೆ ಪೊಲೀಸರು ಕಾರವಾರ ನಿಲ್ದಾಣದಲ್ಲಿ ವ್ಯಕ್ತಿಯನ್ನು ತನಿಖೆಗೆ ಒಳಪಡಿಸಿದರು. ಆದರೆ ಆರಂಭದಲ್ಲಿ ಆರೋಪಿ ಚೆನ್ ಸಿಂಗ್ ತನ್ನ ಬ್ಯಾಗ್ ತೆರೆಯಲು ನಿರಾಕರಿಸಿದ್ದ. ವಿಚಾರಣೆ ಚೆನ್ ಸಿಂಗ್ ಬ್ಯಾಗ್‌ನಲ್ಲಿ ಕೆಲವು ನಗದು (ಭಾರತೀಯ ಕರೆನ್ಸಿ ನೋಟುಗಳು) ಇರುವುದನ್ನು ಒಪ್ಪಿಕೊಂಡ. ಬ್ಯಾಗ್‌ನಲ್ಲಿ ಕಂದು ಬಣ್ಣದ ಸೆಲ್ಲೋ ಟೇಪ್‌ ನಿಂದ ಸುತ್ತಿದ ಪ್ಯಾಕ್‌ನಲ್ಲಿ ಭಾರತೀಯ ಕರೆನ್ಸಿ ನೋಟುಗಳನ್ನು ಹೊಂದಿದ್ದು, ಒಟ್ಟು 2 ಕೋಟಿ ರೂಪಾಯಿಗಳು ಅದರಲ್ಲಿತ್ತು.

ವ್ಯಕ್ತಿಯೊಬ್ಬರ ನಿರ್ದೇಶನದ ಮೇರೆಗೆ ಹಣ ಸಾಗಿಸುತ್ತಿದ್ದೇನೆ ಎಂದು ಹೇಳಿದ್ದಾನೆ. “ಮುಂಬೈನ ಭಾರತ್ ಭಾಯ್ ಎಂಬವರ ಬಳಿ ಕೆಲಸ ಮಾಡುತ್ತಿದ್ದು, ತಿಂಗಳಿಗೆ 15000 ರೂ ಪ್ರೋತ್ಸಾಹಕ ಸಂಬಳ ಪಡೆಯುತ್ತೇನೆ. ಈ ಹಣವನ್ನು ಮಂಗಳೂರಿನಲ್ಲಿರುವ ರಾಜು ಎಂಬುವವರಿಗೆ ತಲುಪಿಸಲು ಹೋಗುತ್ತಿದ್ದೆ” ಎಂದಿದ್ದಾನೆ.

ಇಡೀ ಘಟನೆಯನ್ನು ಪಂಚನಾಮ ಮಾಡಿದ್ದು, ಚಿತ್ರೀಕರಿಸಿ, ದಾಖಲೆಗಳೊಂದಿಗೆ ನೀಡಲಾಗಿದೆ. ಆರೋಪಿತನಿಂದ 2 ಕೋಟಿ ರೂ. ನಗದು, ವಶಪಡಿಸಿಕೊಂಡ ಬ್ಯಾಗ ನ್ನು ಮುಂದಿನ ಕಾನೂನು ಕ್ರಮಕ್ಕಾಗಿ ಆದಾಯ ತೆರಿಗೆ ಇಲಾಖೆಯ ನಿರ್ದೇಶನದಂತೆ ಗ್ರಾಮಾಂತರ ಪೊಲೀಸ್, ಕಾರವಾರ ಸಿಪಿಐಗೆ  ಹಸ್ತಾಂತರಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next