Advertisement

Delhi; ಆನ್‌ಲೈನ್‌ನಲ್ಲಿ ಹಿಂದೂದೇವತೆಗಳ ಆಕ್ಷೇಪಾರ್ಹ ಚಿತ್ರಗಳು: ಯುವಕನ ಬಂಧನ

07:23 PM Nov 03, 2023 | Vishnudas Patil |

ಹೊಸದಿಲ್ಲಿ: ತನ್ನ ವೆಬ್‌ಸೈಟ್ ನಕಲು ಮಾಡಿ ತನ್ನ ವ್ಯವಹಾರಕ್ಕೆ ಹಾನಿ ಮಾಡಿದ್ದಕ್ಕಾಗಿ ಸೇಡು ತೀರಿಸಿಕೊಳ್ಳಲು ಬಯಸಿ ಹಿಂದೂ ದೇವರು ಮತ್ತು ದೇವತೆಗಳ ಅಶ್ಲೀಲ ಚಿತ್ರಗಳನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ 21 ವರ್ಷದ ಯುವಕನನ್ನು ದೆಹಲಿ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

Advertisement

ಬಂಧಿತ ಆರೋಪಿ ಆದರ್ಶ್ ಸೈನಿ ಎಂಬಾತನಾಗಿದ್ದು, ಈತ ತನ್ನ ವೆಬ್‌ಸೈಟ್ ಅನ್ನು ಹೋಲುವ ವೆಬ್‌ಸೈಟ್ ಅನ್ನು ನಿರ್ಮಿಸಿ ಗಳಿಕೆಯಲ್ಲಿ ಭಾರಿ ನಷ್ಟವನ್ನು ಎದುರಿಸಲು ಕಾರಣವಾದ ಇನ್ನೊಬ್ಬ ವ್ಯಕ್ತಿಯ ವಿರುದ್ಧ ಸೇಡು ತೀರಿಸಿಕೊಳ್ಳಲು ಇಷ್ಟೆಲ್ಲ ಮಾಡಿದ್ದಾನೆ ಎನ್ನಲಾಗಿದೆ.

ದೆಹಲಿ ಮಹಿಳಾ ಆಯೋಗ (DCW) ಸೇರಿದಂತೆ ವಿವಿಧ ಕಾನೂನು ಜಾರಿ ಸಂಸ್ಥೆಗಳಿಗೆ ದೂರು ನೀಡಲು ಸೈನಿ ಇಮೇಲ್ ವಿಳಾಸವನ್ನು ರಚಿಸಿದ್ದ, ಮಾರ್ಫ್ ಮಾಡಿದ ಚಿತ್ರಗಳನ್ನು ಪ್ರಸಾರ ಮಾಡಿ ಕ್ರಮ ಕೈಗೊಳ್ಳುವಂತೆ ಕೋರಿದ್ದ ಎಂದು ಉಪ ಪೊಲೀಸ್ ಆಯುಕ್ತ (IFSO) ಹೇಮಂತ್ ತಿವಾರಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next