Advertisement

ಗುಡ್‌ಮಾರ್ನಿಂಗ್‌ ಹೇಳಿ ಕಂಬಿ ಎಣಿಸಿದ!

10:43 AM Oct 24, 2017 | |

ಫೇಸ್‌ಬುಕ್‌ನಲ್ಲಿ ಗುಡ್‌ಮಾರ್ನಿಂಗ್‌ ಅಂತ ಪೋಸ್ಟ್‌ ಹಾಕಲು ಹೋಗುವ ಮುನ್ನ ಇದನ್ನೊಮ್ಮೆ ಓದಿ. ಅಂಥ ಪ್ರಯತ್ನ ಮಾಡಿದರೆ ಬಂಧನಕ್ಕೆ ಒಳಗಾಗುವುದು ಖಚಿತ.

Advertisement

ಏನು ಕಠಿಣ ಕಾನೂನು ಇದು ಎಂದು ಯೋಚನೆ ಮಾಡಬೇಡಿ. ಇಂಥ ಘಟನೆ ನಡೆದದ್ದು ಇಸ್ರೇಲ್‌ನಲ್ಲಿ. ಪ್ಯಾಲೆ ಸ್ತೀನ್‌ ಮೂಲದ ವ್ಯಕ್ತಿ ಫೇಸ್‌ಬುಕ್‌ನಲ್ಲಿ ಗುಡ್‌ ಮಾರ್ನಿಂಗ್‌ ಎಂದು ಸ್ಟೇಟಸ್‌ ಅಪ್‌ಡೇಟ್‌ ಮಾಡಿದ್ದ. ಸ್ವಯಂಚಾಲಿತವಾಗಿರುವ ಭಾಷಾಂತರ ವ್ಯವಸ್ಥೆಯ ಮೂಲಕ ಅದರ ಅರ್ಥ “ನೋವನ್ನು ಉಂಟು ಮಾಡು’ಎಂದು ತೋರಿಸುತ್ತಿತ್ತು. 

ಇಸ್ರೇಲ್‌ನ ಪಶ್ಚಿಮ ದಂಡೆಯ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಕಟ್ಟಡ ನಿರ್ಮಾಣ ಕಾರ್ಮಿಕ ಈ ಎಡವಟ್ಟು ಮಾಡಿಕೊಂಡಿದ್ದಾನೆ. ಆರಂಭದಲ್ಲಿ ಆತನ ವಿರುದ್ಧ ಕೇಸು ದಾಖಲಾಗಿ ಬಂಧಿಸಲಾಗಿತ್ತು.

ನಂತರ ಆತ ಹಾಕಿದ ಪೋಸ್ಟ್‌ ಅನ್ನು ಪರಿಶೀಲಿಸಿದ ಬಳಿಕ ಕಾನೂನು ಬದ್ಧವಾಗಿ ಏನೂ ತೊಂದರೆ ಇಲ್ಲ ಎಂದು ಪೊಲೀಸರಿಗೆ ಮನದಟ್ಟಾಯಿತು. ಬಳಿಕ ಅವನನ್ನು ಬಿಡುಗಡೆ ಮಾಡಲಾಯಿತು. ಅ.15ರಂದು ಆತ ಮುಳ್ನಗುತ್ತಾ ಕಾಫಿ ಕಪ್‌ ಹಿಡಿದುಕೊಂಡು ಗುಡ್‌ಮಾರ್ನಿಂಗ್‌ ಎಂದು ಪೋಸ್ಟ್‌ ಮಾಡಿದ್ದು ರಾದ್ಧಾಂತಕ್ಕೆ ಕಾರಣವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next