Advertisement

ವಿಜಯಪುರ: ಅಕ್ರಮವಾಗಿ ಗಾಂಜಾ ಬೆಳೆದ ಆರೋಪಿ ಬಂಧನ

03:53 PM Apr 01, 2021 | keerthan |

ವಿಜಯಪುರ: ಜಿಲ್ಲೆಯಲ್ಲಿ ಅಕ್ರಮ ಗಾಂಜಾ ಬೆಳೆಗಾರರ ವಿರುದ್ದ ಪೊಲೀಸರು ಕಾರ್ಯಾಚರಣೆ ಮುಂದುವರೆಸಿದ್ದು, ಗುರುವಾರ ಮತ್ತೊಬ್ಬನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Advertisement

ಗುರುವಾರ ಕಲಕೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದೇವರಹಿಪ್ಪರಗಿ ತಾಲೂಕಿನ ಆಲಗೂರ ಗ್ರಾಮದ ಸಾಯಬಣ್ಣ ಭಗವಂತಪ್ಪ ಮುರಕನಾಳ ಬಂಧಿತ ಆರೋಪಿ. ಮಹಿಳಾ ಎಸ್ ಐ ಜಿ.ಜಿ.ಬಿರಾದಾರ ನೇತೃತ್ವದಲ್ಲಿ ದಾಳಿ ನಡೆಸಿದಾಗ ಆರೋಪಿ 240 ಸರ್ವೆ ನಂಬರ್ ನ ತನ್ನ‌ ಜಮೀನಿನಲ್ಲಿ ಬದನೆ, ಹತ್ತಿ ಬೆಳೆಯಲ್ಲಿ ಅಕ್ರಮವಾಗಿ ಬೆಳೆದಿದ್ದ 7 ಕೆಜಿ ಗಾಂಜಾವನ್ನು ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ:ಚಿಕ್ಕಮಗಳೂರು: ಈಜಲು ಹೋಗಿ ಯುವಕ ನೀರುಪಾಲು, ಮೊಬೈಲ್ ನಲ್ಲಿ ಸೆರೆಯಾಯ್ತು ಮುಳುಗುವ ದೃಶ್ಯ!

ಈ ಕುರಿತು ಕಲಕೇರಿ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಕಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next