ಕಾಸರಗೋಡು: ಗರ್ಭಿಣಿ ಮೇಕೆಯೊಂದರ ಮೇಲೆ ಅತ್ಯಾಚಾರವೆಸಗಿ ನಂತರ ಮೇಕೆಯನ್ನು ಕೊಂದ ಆರೋಪದಡಿಯಲ್ಲಿ ಪೊಲೀಸರು ವ್ಯಕ್ತಿಯೋರ್ವನನ್ನು ಬಂಧಿಸಿದ್ದಾರೆ. ಕೇರಳ ಕಾಸರಗೋಡಿನಲ್ಲಿ ಈ ಘಟನೆ ನಡೆದಿದೆ.
ಬಂಧಿತ ಆರೋಪಿಯನ್ನು ಸೆಂಥಿಲ್ ಎಂದು ಗುರುತಿಸಲಾಗಿದೆ. ಈತ ಹೋಟೆಲ್ ಕಾರ್ಮಿಕನಾಗಿದ್ದು, ಈತ ತಮಿಳುನಾಡು ಮೂಲದವನು ಎಂದು ಪೊಲೀಸರು ತಿಳಿಸಿದ್ದಾರೆ.
ಹೋಟೆಲ್ ಮಾಲಿಕ ನೀಡಿದ ದೂರಿನನ್ವಯ ಹೊಸದುರ್ಗ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ:ದೇಶದ ಅತಿ ದೊಡ್ಡ ಪಕ್ಷ ಗೂಂಡಾಗಿರಿ ಮಾಡಿದರೆ ಪ್ರಗತಿ ಹೇಗೆ : ಕೇಜ್ರಿವಾಲ್ ಪ್ರಶ್ನೆ
‘‘ಮರಣೋತ್ತರ ಪರೀಕ್ಷೆ ನಡೆಸಿದ ಸರಕಾರಿ ಪಶು ವೈದ್ಯಾಧಿಕಾರಿಗಳ ಪ್ರಾಥಮಿಕ ವರದಿಯಲ್ಲಿ ಮೇಕೆ ಅಸ್ವಾಭಾವಿಕ ಸಂಭೋಗಕ್ಕೆ ಒಳಗಾಗಿರುವುದು ಕಂಡುಬಂದಿದ್ದು, ವಿಸ್ತೃತ ವರದಿಯಲ್ಲಿ ಮಾತ್ರ ಸಾವಿಗೆ ಕಾರಣ ತಿಳಿಯಲಿದೆ” ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.