ಮುಂಬಯಿ : ನೆರೆಮನೆಯಾತನ ಪತ್ನಿಯ ಬಾತ್ ರೂಮ್ ದೃಶ್ಯವನ್ನು ವಿಡಿಯೋ ಮಾಡಿದ ಆರೋಪದಲ್ಲಿ 30ರ ಹರೆಯದ ವ್ಯಕ್ತಿಯನ್ನು ನಗರ ಹೊರವಲಯದ ಓಶಿಯಾರಾದಲ್ಲಿ ಬಂಧಿಸಲಾಗಿದೆ.
ಬಂಧಿತ ಆರೋಪಿ ಸದ್ದಾಂ ಶೇಖ್ ವೃತ್ತಿಯಲ್ಲಿ ಟ್ಯಾಕ್ಸಿ ಡ್ರೈವರ್ ಆಗಿದ್ದು ಆತನು ಬೆಹರಾಮ್ ಬಾಗ್ ಪ್ರದೇಶದಲ್ಲಿ ವಾಸಿಸಿಕೊಂಡಿದ್ದಾನೆ.
ಶೇಖ್ ವಾಸವಾಗಿರುವ ಕೋಣೆಯ ಗೋಡೆಯನ್ನೇ ಸಮಾನವಾಗಿ ಹೊಂದಿರುವ ತನ್ನ ಮನೆಯ ಬಾತ್ ರೂಮಿನ ಸೂರಿನ ಎಡೆಯಲ್ಲಿ ಮೊಬೈಲ್ ಫೋನ್ ಇರಿಸಲಾಗಿರುವುದನ್ನು ಮಹಿಳೆಯು ಕಂಡು ಪತಿಯ ಗಮನಕ್ಕೆ ತಂದಳು.
ಆ ಪ್ರಕಾರ ಪತಿ-ಪತ್ನಿ ಜತೆಯಾಗಿ ನೀಡಿದ ದೂರನ್ನು ಅನುಸರಿಸಿ ಓಶಿವಾರಾ ಪೊಲೀಸರು ಶೇಖ್ ನನ್ನು ನಿನ್ನೆ ಬುಧವಾರ ಬಂಧಿಸಿದರು.
ಪ್ರಕರಣದ ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವ ಪೊಲೀಸರು, ಆರೋಪಿ ಶೇಖ್ ನ ಮೊಬೈಲ್ ಫೋನನ್ನು ಫೊರೆನ್ಸಿಕ್ ಲ್ಯಾಬಿಗೆ ಪರೀಕ್ಷೆಗಾಗಿ ಕಳುಹಿಸಿದ್ದಾರೆ.