ಹೈದರಾಬಾದ್: ಸ್ನೇಹಿತನೊಂದಿಗೆ ಸೇರಿ ಪತ್ನಿಯ ಮೇಲೆ ಅತ್ಯಾಚಾರ ಎಸರುವ ಲಜ್ಜೆಗೆಟ್ಟ , ವಿಕೃತ ಮನೋಭಾವದ ಪತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
ಮದನ್‌ಪೇಟ್ ನಿವಾಸಿಯಾಗಿರುವ 26 ವರ್ಷದ ಆರೋಪಿ ಆಸ್ಟ್ರೇಲಿಯಾದಲ್ಲಿ ಉನ್ನತ ವ್ಯಾಸಂಗ ನಡೆಸುತ್ತಿದ್ದು, 2016 ರಲ್ಲಿ ವಿವಾಹವಾಗಿದ್ದ. 21 ರ ಹರೆಯದ ಪತ್ನಿಯ ಮೇಲೆ ಸ್ನೇಹಿತನೊಂದಿಗೆ ಸೆಕ್ಸ್ ನಡೆಸುವಂತೆ ಒತ್ತಾಯಿಸುತ್ತಿದ್ದ .ಪ್ರತಿರೋಧ ತೋರಿದಾಗ ಬಲತ್ಕಾರ ನಡೆಸಿದ್ದಾರೆ ಎಂದು ಸಂತ್ರಸ್ತೆ ದೂರಿನಲ್ಲಿ ಹೇಳಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಘಟನೆ ನಡೆಯುವ ವೇಳೆ ಆರೋಪಿಯ ತಾಯಿಯೂ ಮನೆಯಲ್ಲಿದ್ದು ಹೇಯ ಕೃತ್ಯಕ್ಕೆ ಸಾಕ್ಷಿಯಾಗಿರುವ ಹಿನ್ನಲೆಯಲ್ಲಿ ಆಕೆಯನ್ನೂ ಪೊಲೀಸರು ಬಂಧಿಸಿದ್ದಾರೆ.
ಮಾರ್ಚ್ 4 ರಂದು ಘಟನೆ ನಡೆದಿದ್ದು , ಆಸ್ಟ್ರೇಲಿಯಾದಿಂದ ಬಂದ ಪತಿ ಸ್ನೇಹಿತನನ್ನು ಮನೆಗೆ ಕರೆದು ಪತ್ನಿಗೆ ನಿದ್ರೆ ಮಾತ್ರೆಗಳನ್ನು ನೀಡಿ ವಿಕೃತಿ ಮೆರೆದಿರುವುದಾಗಿ ವರದಿಯಾಗಿದೆ.
ವಿದೇಶದಲ್ಲಿಂದಲೆ ನಿರಂತರವಾಗಿ ತನ್ನ ನಗ್ನ ಫೋಟೋಗಳನ್ನು ಕಳುಹಿಸಲು ಹೇಳಿ ಅವುಗಳನ್ನು ಸ್ನೇಹಿತರೊಂದಿಗೆ ಹಂಚಿಕೊಳ್ಳುತ್ತಿದ್ದ ಎಂದು ದೂರಿನಲ್ಲಿ ಅಳಲು ತೋಡಿಕೊಂಡಿದ್ದಾಳೆ.
ಸ್ನೇಹಿತ ತಲೆ ಮರೆಸಿಕೊಂಡಿದ್ದು ಆತನಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.