Advertisement

ದೀದಿಗೆ ದಿಢೀರ್‌ ದಿಗಿಲು

12:50 AM May 29, 2019 | sudhir |

ಹೊಸದಿಲ್ಲಿ: ಲೋಕಸಭೆ ಚುನಾವಣೆಯ ಫ‌ಲಿತಾಂಶದ ಬಳಿಕ ಪಶ್ಚಿಮ ಬಂಗಾಲ ಸಿಎಂ ಮಮತಾ ಬ್ಯಾನರ್ಜಿಯವರಿಗೆ ಬಹುದೊಡ್ಡ ಆಘಾತ ಹಾಗೂ ಹಿನ್ನಡೆ ಎಂಬಂತೆ ತೃಣಮೂಲ ಕಾಂಗ್ರೆಸ್‌ನ ಇಬ್ಬರು ಶಾಸಕರು ಹಾಗೂ 50 ಮಂದಿ ಕೌನ್ಸಿಲರ್‌ಗಳು ಮಂಗಳವಾರ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.

Advertisement

“ಫ‌ಲಿತಾಂಶ ಬಂದ ಬಳಿಕ ನಿಮ್ಮ ಶಾಸಕರೇ ನಿಮ್ಮನ್ನು ತೊರೆದು ನಮ್ಮೊಂದಿಗೆ ಬರಲಿದ್ದಾರೆ’ ಎಂದು ದೀದಿಗೆ ಪ್ರಧಾನಿ ಮೋದಿ ಅವರು ಸವಾಲೆಸೆದ ಒಂದು ತಿಂಗಳೊಳಗೆ ಈ ಬೆಳವಣಿಗೆ ನಡೆದಿರುವುದು ವಿಶೇಷ.

ಫ‌ಲಿತಾಂಶದ ಬಳಿಕ ಸತತ ಹಿನ್ನಡೆ ಅನುಭವಿಸುತ್ತಿರುವ ದೀದಿಗೆ ಮಂಗಳವಾರದ ಬೆಳವಣಿಗೆ ಇನ್ನಷ್ಟು ಶಾಕ್‌ ನೀಡಿದೆ. ಬಿಜೆಪಿ ನಾಯಕ ಮುಕುಲ್‌ ರಾಯ್‌ ಅವರ ಪುತ್ರ, ಟಿಎಂಸಿಯ ಮಾಜಿ ನಾಯಕ ಶುಭಾÅಂಗುÏ, ಟಿಎಂಸಿಯ ಇಬ್ಬರು ಶಾಸಕರು ಹಾಗೂ 50 ಕೌನ್ಸಿಲರ್‌ಗಳು ಕೇಸರಿ ಪಕ್ಷ ಸೇರ್ಪಡೆಗೊಂಡಿದ್ದಾರೆ. ಅಷ್ಟೇ ಅಲ್ಲ, ಈ ರೀತಿಯ ಪಕ್ಷಾಂತರವು 7 ಹಂತಗಳಲ್ಲಿ ಮುಂದುವರಿಯಲಿದೆ ಎಂದು ಹೇಳುವ ಮೂಲಕ ಬಿಜೆಪಿ ನಾಯಕರು ಮಮತಾರ ಕಾಲೆಳೆದಿದ್ದಾರೆ. ಜೂ.1ರಂದು ಇನ್ನೂ 6 ಟಿಎಂಸಿ ಶಾಸಕರು ಬಿಜೆಪಿ ಸೇರಲಿದ್ದಾರೆ ಎನ್ನಲಾಗಿದೆ.

7 ಹಂತಗಳಲ್ಲಿ ಪಕ್ಷಾಂತರ: ಟಿಎಂಸಿ ನಾಯಕರನ್ನು ಪಕ್ಷಕ್ಕೆ ಬರಮಾಡಿಕೊಂಡ ಬಳಿಕ ಮುಕುಲ್‌ ರಾಯ್‌ ಮತ್ತು ಬಿಜೆಪಿ ಪ.ಬಂಗಾಲ ಉಸ್ತುವಾರಿ ಕೈಲಾಶ್‌ ವಿಜಯವರ್ಗೀಯ ಅವರು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದಾರೆ. “ಬಿಜ್‌ಪುರ ಶಾಸಕ ಶುಭಾÅಂಗುÏ ರಾಯ್‌, ಬಿಷ್ಣುಪುರ ಶಾಸಕ ತುಷಾರ್‌ ಕಾಂತಿ ಭಟ್ಟಾಚಾರ್ಯ, ಸಿಪಿಎಂ ಶಾಸಕ ದೇವೇಂದ್ರನಾಥ್‌ ರಾಯ್‌ ಅವರು 50 ಕೌನ್ಸಿಲರ್‌ಗಳ ಜತೆಗೆ ಇಂದು ಬಿಜೆಪಿಗೆ ಸೇರಿದ್ದಾರೆ. ಇದು ಇಲ್ಲಿಗೇ ಮುಗಿದಿಲ್ಲ. ಇನ್ನೂ 7 ಹಂತಗಳಲ್ಲಿ ಇನ್ನಷ್ಟು ಟಿಎಂಸಿ ಶಾಸಕರು ನಮ್ಮ ಪಕ್ಷ ಸೇರಲಿದ್ದಾರೆ’ ಎಂದು ವಿಜಯವರ್ಗೀಯ ಹೇಳಿದ್ದಾರೆ.

ತಿಂಗಳ ಹಿಂದೆ ಪ.ಬಂಗಾಲದಲ್ಲಿ ಚುನಾವಣಾ ಪ್ರಚಾರ ನಡೆಸಿದ್ದ ಪ್ರಧಾನಿ ಮೋದಿ, “ಟಿಎಂಸಿಯ 40 ಶಾಸಕರು ನಮ್ಮೊಂದಿಗೆ ಸಂಪರ್ಕದಲ್ಲಿದ್ದಾರೆ. ಮೇ 23ರಂದು ಬಂಗಾಲ ದಾದ್ಯಂತ ಕಮಲ ಅರಳುತ್ತಿದ್ದಂತೆ, ದೀದಿಯ ಶಾಸಕರೇ ಅವರನ್ನು ಬಿಟ್ಟು ಓಡಿಹೋಗಲಿದ್ದಾರೆ’ ಎಂದು ಹೇಳಿದ್ದರು.

Advertisement

ಬಿಜೆಪಿ ಮುಂದಿನ ಟಾರ್ಗೆಟ್‌ 333
2014ರ ಚುನಾವಣೆಯಲ್ಲಿ 282 ಹಾಗೂ 2019ರಲ್ಲಿ 303 ಸೀಟುಗಳನ್ನು ಗೆದ್ದಿರುವ ಬಿಜೆಪಿಯ ಮುಂದಿನ ಗುರಿ ಏನು ಗೊತ್ತಾ? 2024ರಲ್ಲಿ 333 ಸ್ಥಾನಗಳಲ್ಲಿ ಜಯಭೇರಿ ಬಾರಿಸುವುದು! ಹೌದು ಆಂಧ್ರ ಮತ್ತು ತ್ರಿಪುರದಲ್ಲಿ ಪಕ್ಷದ ಉಸ್ತುವಾರಿ ಹೊತ್ತಿರುವ ರಾಷ್ಟ್ರೀಯ ಕಾರ್ಯದರ್ಶಿ ಸುನೀಲ್‌ ದೇವ್‌ಧವ್‌ ಈ ವಿಚಾರ ತಿಳಿಸಿದ್ದಾರೆ. ನಾವು ಮುಂದಿನ ಲೋಕಸಭೆ ಚುನಾವಣೆಯಲ್ಲಿ 333 ಸೀಟುಗಳನ್ನು ಗೆಲ್ಲುವ ಗುರಿ ಹಾಕಿಕೊಂಡಿದ್ದೇವೆ. ಅದನ್ನು ಸಾಧಿಸಬೇಕೆಂದರೆ ಪ.ಬಂಗಾಲದಿಂದ ತಮಿಳುನಾಡಿನವರೆಗೆ ಪಕ್ಷ ಬಲಪಡಿಸಬೇಕಾಗುತ್ತದೆ. ನಾವು ಈ ಎರಡು ರಾಜ್ಯಗಳತ್ತ ಗಮನ ಹರಿಸಲಿದ್ದೇವೆ ಎಂದು ದೇವ್‌ಧರ್‌ ಹೇಳಿದ್ದಾರೆ. ಜತೆಗೆ, ನಾನೀಗಾಗಲೇ ತೆಲುಗು ಹಾಗೂ ಬಂಗಾಲಿ ಭಾಷೆ ಕಲಿತಿದ್ದೇನೆ. ಜನರ ಹೃದಯ ಗೆಲ್ಲಬೇಕೆಂದರೆ ಭಾಷೆಯೂ ಅತ್ಯಗತ್ಯ ಎಂದಿದ್ದಾರೆ.

ಮುಂದಿನ ಬಿಜೆಪಿ ರಾಷ್ಟ್ರಾಧ್ಯಕ್ಷ ಯಾರು?
ಬಿಜೆಪಿಯನ್ನು ಶಿಸ್ತಿನಿಂದ ನಡೆಸಿಕೊಂಡು ಬಂದಿರುವ ಪಕ್ಷದ ಅಧ್ಯಕ್ಷ ಅಮಿತ್‌ ಶಾ ಅವರು ಮೋದಿ ಸಂಪುಟ ಸೇರಿದರೆ ಪಕ್ಷದ ಚುಕ್ಕಾಣಿ ಯಾರಿಗೆ ಸಲ್ಲುತ್ತದೆ? ಸದ್ಯಕ್ಕೆ ಬಿಜೆಪಿಯ ಆಂತರಿಕ ವಲಯದಲ್ಲಿ ಇದೊಂದು ಯಕ್ಷ ಪ್ರಶ್ನೆಯಾಗಿ ಸದ್ದು ಮಾಡುತ್ತಿದೆ. ಈ ಕುರಿತಂತೆ ಪಕ್ಷದೊಳಗೆ ಚಿಂತನೆ ಆರಂಭವಾಗಿದ್ದು, ಮೋದಿ ಯವರ ಹಿಂದಿನ ಸಂಪುಟದಲ್ಲಿ ಆರೋಗ್ಯ ಸಚಿವರಾಗಿದ್ದ ಜೆ.ಪಿ. ನಡ್ಡಾ ಹಾಗೂ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್‌ ಹೆಸರು ಪ್ರಧಾನವಾಗಿ ಕೇಳಿ ಬರುತ್ತಿವೆ ಎಂದು ಹೇಳಲಾಗಿದೆ. ಇದೇ ವೇಳೆ, ಅರುಣ್‌ ಜೇಟಿÉ ಅವರು ಅನಾರೋಗ್ಯ ಹಿನ್ನೆಲೆಯಲ್ಲಿ ಸಚಿವ ಸ್ಥಾನ ನಿರಾಕರಿಸಿದರೆ, ಹಣಕಾಸು ಸಚಿವರ ಹುದ್ದೆಗೆ ಅಮಿತ್‌ಶಾರನ್ನು ಪರಿಗಣಿಸುವ ಸಾಧ್ಯತೆಯೂ ಇದೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next