Advertisement

ಸಂದೇಶ್‌ಖಾಲಿಯಲ್ಲಿ ಮೂವರು ಬಲಿಯಾಗಲು ಮಮತಾ ಭಾಷಣ ಕಾರಣ: ಬಿಜೆಪಿ

09:07 AM Jun 12, 2019 | Team Udayavani |

ಸಂದೇಶ್‌ಖಾಲಿ : ಸಂದೇಶ್‌ಖಾಲಿಯಲ್ಲಿನ ಹಿಂಸೆಗೆ ಮೂವರು ಬಲಿಯಾಗಲು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಾಡಿದ್ದ ದ್ವೇಷಯುಕ್ತ ಭಾಷಣವೇ ಕಾರಣ ಎಂದು ಬಿಜೆಪಿ ನಾಯಕ ಮುಕುಲ್‌ ರಾಯ್‌ ಹೇಳಿದ್ದಾರೆ.

Advertisement

ಮಮತಾ ಬ್ಯಾನರ್ಜಿ ಅವರು ತಮ್ಮ ಭಾಷಣದಲ್ಲಿ ಕೇಸರಿ ಪಕ್ಷದ ಬೆಂಬಲಿಗರ ಮೇಲೆ ದಾಳಿ ನಡೆಸುವಂತೆ ಹೇಳಿರುವುದೇ ಹಿಂಸೆಗೆ ಕಾರಣವಾಯಿತು ಎಂದು ರಾಯ್‌ ಹೇಳಿದರು.

ಮುಕುಲ್‌ ರಾಯ್‌ ಅವರು ಭಂಗೀಪಾರಾ ಗ್ರಾಮಕ್ಕೆ ತೆರಳಿ ಅಲ್ಲಿ ಹಿಂಸೆಗೆ ಬಲಿಯಾಗಿದ್ದ ಪ್ರದೀಪ್‌ ಮಂಡಲ್‌ ಮತ್ತು ಸುಕಾಂತ ಮಂಡಲ್‌ ಅವರ ಕುಟುಂಬದವರನ್ನು ಭೇಟಿಯಾಗಿ ಸಾಂತ್ವನ ಹೇಳಿದರು.

ಮೃತರ ಕುಟುಂಬಕ್ಕೆ ಗರಿಷ್ಠ ಸಾಧ್ಯ ನೆರವನ್ನು ನೀಡುವಂತೆ ತಾನು ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಅವರನ್ನು ಮನವಿ ಮಾಡುತ್ತೇನೆ ಎಂದು ಮುಕುಲ್‌ ರಾಯ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next