Advertisement

ಇಂದು ಏಕತೆಗೆ ಓಟ: ದೀದಿ ಅಪಸ್ವರ

06:50 AM Oct 31, 2017 | Team Udayavani |

ಹೊಸದಿಲ್ಲಿ:  ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಅವರ ಜನ್ಮದಿನದ ಅಂಗವಾಗಿ ಮಂಗಳವಾರ ದೇಶಾದ್ಯಂತ “ಏಕತೆಗಾಗಿ ಓಟ’ ಹಮ್ಮಿಕೊಳ್ಳಲಾಗಿದ್ದು, ದಿಲ್ಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲೇ ಕಾರ್ಯಕ್ರಮ ನಡೆಯಲಿದೆ. ಇದರಲ್ಲಿ ಕೇಂದ್ರ ಸಚಿವರು, ಸರ್ಕಾರಿ ಅಧಿಕಾರಿಗಳು ಸೇರಿದಂತೆ 20 ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆಯಿದೆ.

Advertisement

ಪಟೇಲ್‌ ಸ್ಮರಣಾರ್ಥ ದೇಶಾದ್ಯಂತ ಇಂಥ ಕಾರ್ಯಕ್ರಮ ಹಮ್ಮಿಕೊಳ್ಳುವಂತೆ ಜನತೆಗೆ ಪ್ರಧಾನಿ ಮೋದಿ ಅವರು ಮನ್‌ ಕಿ ಬಾತ್‌ನಲ್ಲೂ ಕರೆ ನೀಡಿದ್ದರು. ಇದೇ ವೇಳೆ, ದೇಶದ ಶಾಲಾ ಕಾಲೇಜುಗಳಲ್ಲೂ ಕಾರ್ಯ ಕ್ರಮ ಆಯೋಜಿಸುವಂತೆ ಹಾಗೂ ಅದರ ವಿಡಿಯೋ ರೆಕಾರ್ಡಿಂಗ್‌ ಮಾಡಿ ಯುಜಿಸಿಗೆ ಕಳುಹಿಸಿಕೊಡುವಂತೆ ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ಸುತ್ತೋಲೆ ಕಳುಹಿಸಿತ್ತು. ಇದಕ್ಕೆ ಪ್ರತಿಕ್ರಿಯಿಸಿರುವ ಪಶ್ಚಿಮ ಬಂಗಾಲ ಸಿಎಂ ಮಮತಾ, “ಸುತ್ತೋಲೆಯನ್ನು ರಾಜ್ಯದ ಶಾಲೆ- ಕಾಲೇಜುಗಳು ಪಾಲಿಸ ಬೇಕಾಗಿಲ್ಲ. ನಾವು ಪಟೇಲ್‌ ಜನ್ಮದಿನವನ್ನು ನಮ್ಮಿಷ್ಟದಂತೆ ಆಚರಿಸುತ್ತೇವೆ,’ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next