Advertisement

ಬಿಜೆಪಿಯೇತರ ನಾಯಕರಿಗೆ ಮಮತಾ ಬ್ಯಾನರ್ಜಿ ಪತ್ರ

08:31 PM Mar 29, 2022 | Team Udayavani |

ಕೋಲ್ಕತ: ಬಿಜೆಪಿಯ ಆಡಳಿತ ದುರ್ಬಳಕೆಯನ್ನು ತಪ್ಪಿಸುವುದಕ್ಕಾಗಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಬಿಜೆಪಿಯೇತರ ಪಕ್ಷಗಳು ಆಡಳಿತದಲ್ಲಿರುವ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಮತ್ತು ವಿರೋಧ ಪಕ್ಷಗಳ ನಾಯಕರಿಗೆ ಪತ್ರ ಬರೆದಿದ್ದಾರೆ.

Advertisement

ಕೇಂದ್ರದಲ್ಲಿ ಆಡಳಿತದಲ್ಲಿರುವ ಬಿಜೆಪಿ ಕೇಂದ್ರೀಯ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಅವರು ಪತ್ರದಲ್ಲಿ ಆರೋಪಿಸಿದ್ದಾರೆ. “ಈ ದುರ್ಬಳಕೆಯನ್ನು ತಪ್ಪಿಸಲು ಎಲ್ಲ ಪಕ್ಷಗಳು ಒಂದಾಗಬೇಕು. ಎಲ್ಲರೂ ಒಟ್ಟಾಗಿ ತಂತ್ರ ರೂಪಿಸಲು ಸಭೆ ನಡೆಸಬೇಕು. ಎಲ್ಲರ ಅನುಕೂಲ ಮತ್ತು ಸೂಕ್ತತೆಗೆ ಅನುಗುಣವಾಗಿ ಒಂದು ಸ್ಥಳದಲ್ಲಿ ಸಭೆ ಸೇರೋಣ.

ಇದನ್ನೂ ಓದಿ:ಧರ್ಮಾಪುರದಲ್ಲಿ ಮಾರಮ್ಮದೇವರ ಉತ್ಸವ : ತಂಬಿಟ್ಟು ಆರತಿ ಹೊತ್ತು ಸಾಗಿಬಂದ ಹೆಂಗಳೆಯರು

ನಮ್ಮ ದೇಶಕ್ಕೆ ಅರ್ಹವಾದ ಸರ್ಕಾರ ರೂಪುಗೊಳ್ಳುವುದಕ್ಕೆ ನಾವು ದಾರಿ ಮಾಡಿಕೊಡೋಣ’ ಎಂದು ಅವರು ಪತ್ರದಲ್ಲಿ ಕೇಳಿಕೊಂದ್ದಾರೆ. ವಿಶೇಷವೆಂದರೆ ಟಿಎಂಸಿಯನ್ನು ವಿರೋಧಿಸುವ ಕಾಂಗ್ರೆಸ್‌ ಪಕ್ಷದ ನಾಯಕರಿಗೂ ದೀದಿ ಪತ್ರ ಬರೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next