Advertisement

ನಂದಿಗ್ರಾಮದಲ್ಲಿ ಟಿಎಂಸಿ, ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ : ರಾಜ್ಯಪಾಲರಿಗೆ ಮಮತಾ ದೂರು

05:26 PM Apr 01, 2021 | Team Udayavani |

ನಂದಿಗ್ರಾಮ : ಆಡಳಿತ ಪಕ್ಷ ತೃಣಮೂಲ ಹಾಗೂ ಪ್ರತಿ ಪಕ್ಷ ಬಿಜೆಪಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ತಾರಕಕ್ಕೆ ಏರಿದ ಘಟನೆ ಪಶ್ಚಿಮ ಬಂಗಾಳದ ಹೈವೊಲ್ಟೇಜ್ ವಿಧಾನಸಭಾ ಕ್ಷೇತ್ರ ನಂದಿಗ್ರಾಮದ ಮತಗಟ್ಟೆಯೊಂದರಲ್ಲಿ ನಡೆದಿದೆ.

Advertisement

ಈ ಘರ್ಷಣೆಗೆ ಸಂಬಂಧಿಸಿದಂತೆ, ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ರಾಜ್ಯಪಾಲ ಜಗದೀಪ್ ಧಂಕರ್ ಅವರಿಗೆ ಕರೆ ಮಾಡಿ,  ಕಾನೂನು ಮತ್ತು ಸುವ್ಯವಸ್ಥೆಯ ಕಾಪಾಡುವಲ್ಲಿ ಚುನಾವಣಾ ಆಯೋಗ ವಿಫಲವಾಗಿದೆ ಎಂದು ದೂರು ನೀಡಿದ್ದಾರೆ.

ಓದಿ : ದೈವಸ್ಥಾನಗಳ ಕಾಣಿಕೆ ಹುಂಡಿಗಳಿಗೆ ಅಪಚಾರ ಪ್ರಕರಣ: ಇಬ್ಬರು ಆರೋಪಿಗಳ ಬಂಧನ

ಯಾವ ಸಮಯದಲ್ಲಿ ಏನು ಬೇಕಾದರೂ ಆಗಬಹುದು, ಕಾನೂನು ಹಾಗೂ ಸುವ್ಯವಸ್ಥೆ ಹದಗೆಟ್ಟಿದೆ. ನಾನು ಭಯಭೀತಳಾಗಿದ್ದೇನೆ ಎಂದಿದ್ದಾರೆ.

ಸದ್ಯ, ಘಟನೆಯ ಬಗ್ಗೆ ಚುನಾವಣಾ ಆಯೋಗವು ಸ್ಥಳೀಯ ಆಡಳಿತದಿಂದ  ವರದಿಯನ್ನು ಕೋರಿದೆ ಎಂಬ ವರದಿಯಾಗಿದೆ.

Advertisement

ಬೇರೆ ರಾಜ್ಯಗಳ ಗೂಂಡಾಗಳು ಇಲ್ಲಿ ಘರ್ಷಣೆಯನ್ನು ಸೃಷ್ಟಿಸುತ್ತಿದ್ದಾರೆ” ಎಂದು ಆರೋಪಿಸಿದ ಬ್ಯಾನರ್ಜಿ, ನಾನು ಬೆಳಿಗ್ಗೆಯಿಂದ  ಮತದಾನಕ್ಕೆ ಸಂಬಂಧಿಸಿದ 63 ದೂರುಗಳನ್ನು ದಾಖಲಿಸಿದ್ದೇನೆ, ಚುನಾವಣಾ ಆಯೋಗವು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆಯೋಗದ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.

ಇನ್ನು, ಘರ್ಷಣೆಯಲ್ಲಿ ಪಾಲ್ಗೊಂಡು ಜೈ ಶ್ರೀ ರಾಮ್ ಘೋಷಣೆಗಳನ್ನು ಕೂಗುತ್ತಿರುವವರು ಬಿಹಾರ್ ಹಾಗೂ ಉತ್ತರ ಪ್ರದೇಶದ ಮೂಲದವರು, ಕೇಂದ್ರ ಅರೆಸೇನಾ ಸಿಬ್ಬಂದಿಗಳು ಅವರನ್ನು ರಕ್ಷಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಮುಕ್ತ ಮತ್ತು ನ್ಯಾಯಯುತ ಮತದಾನದ ಹಿತದೃಷ್ಟಿಯಿಂದ ಎನ್‌ ಡಿ ಎ ಪಕ್ಷ ಆಳುವ ರಾಜ್ಯಗಳಾದ ಬಿಹಾರ, ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶದ ಭದ್ರತಾ ಪಡೆಗಳನ್ನು ಬಂಗಾಳದಲ್ಲಿ ನಿಯೋಜಿಸಬಾರದು ಎಂದು ಕೋರಿ ಅವರ ಪಕ್ಷ ಈ ಹಿಂದೆ ಚುನಾವಣಾ ಆಯೋಗಕ್ಕೆ ಪತ್ರ ಬರೆದಿತ್ತು.

ಓದಿ : ಭಿನ್ನಾಭಿಪ್ರಾಯಗಳ ಬಗ್ಗೆ  ಸಿಎಂ ಜತೆ ಚರ್ಚಿಸಿ -ಬಸವರಾಜ ಬೊಮ್ಮಾಯಿ ಸೂಚನೆ

ಪಕ್ಷದ ಹಿರಿಯ ಮುಖಂಡ ಡೆರೆಕ್ ಒ’ಬ್ರಿಯನ್ ಈಗಾಗಲೇ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದು, ಬಿಜೆಪಿಗರು ಮತಗಟ್ಟೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ, ಬಿಜೆಪಿ ಕಾರ್ಯಕರ್ತರ ಬೃಹತ್ ಜನಸಮೂಹವು 6, 7, 49, 27, 162, 21, 26, 13, 262, 256, 163, 20 ಸಂಖ್ಯೆಯ ಮತಗಟ್ಟೆಗಳನ್ನು ಪ್ರವೇಶಿಸಿ ಅಕ್ರಮವಾಗಿ ಮತ ಹಾಕಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಓದಿ : ಇಷ್ಟಾರ್ಥ ಸಿದ್ಧಿಸುವ ಭಕ್ತರ ಪಾಲಿನ ದೇವರಾಗಿರುವ ಶ್ರೀ ಶಿವಕುಮಾರ ಸ್ವಾಮೀಜಿ

Advertisement

Udayavani is now on Telegram. Click here to join our channel and stay updated with the latest news.

Next