Advertisement

ಜೋಕರ್ ವೈರಸ್ ನಿಂದ ಮೋಸ! ಏನಿದು ಮಾಹಿತಿ ಕದಿಯೋ ಮಾಲ್ ವೇರ್ …

09:57 AM Sep 18, 2019 | Mithun PG |

ಆನ್ ಲೈನ್ ಗಳ ಬಳಕೆ ಹೆಚ್ಚಾಗುತ್ತಿದ್ದಂತೆ ಅದನ್ನು ದುರ್ಬಳಕೆ ಮಾಡಿಕೊಂಡು ಮಾಹಿತಿ ಕದಿಯುವ ವ್ಯವಸ್ಥಿತ ಜಾಲ ಇಂದು ವಿಶ್ವದೆಲ್ಲೆಡೆ ಕಾಣಸಿಗುತ್ತದೆ. ಸೈಬರ್ ಸುರಕ್ಷತಾ ಕಂಪೆನಿಗಳು ಹಲವು ಮುನ್ನೆಚ್ಚರಿಕೆ ಕ್ರಮ ಕೈಗೊಂಡರೂ ದುರುದ್ಧೇಶಪೂರಿತ ತಂತ್ರಾಂಶ ಅಥವಾ ಮಾಲ್ ವೇರ್ ಗಳ ಒಳನುಸುಳುವಿಕೆ ಹೆಚ್ಚಾಗುತ್ತಲೆ ಇದೆ. ಸೈಬರ್ ಸುರಕ್ಷಾ ಕಂಪೆನಿಗಳು ಕಾಲದಿಂದ ಕಾಲಕ್ಕೆ ಎಚ್ಚರಿಕೆ ನೀಡುತ್ತಲೇ ಬಂದಿದೆ. ಈಗ ಸಿಎಸ್ ಐಎಸ್ ಹೆಸರಿನ ಸೈಬರ್ ಸುರಕ್ಷಾ ಕಂಪೆನಿಯೊಂದು  24 ಆ್ಯಪ್ ಗಳಿಗೆ ಅಂಟಿಕೊಂಡಿದ್ದ ಮಾಲ್ ವೇರ್ ಒಂದನ್ನು ಕಂಡುಹಿಡಿದಿದ್ದು ಅವುಗಳ ಬಳಕೆ ನಿಲ್ಲಿಸುವಂತೆ ಸೂಚನೆ ನೀಡಿದೆ.

Advertisement

ಈ ಅ್ಯಂಡ್ರಾಯ್ಡ್ ಆ್ಯಪ್ ಗಳು  ಬಹುತೇಕ ಜನಪ್ರಿಯವೆ. ಸುಮಾರು 5 ಲಕ್ಷಕ್ಕಿಂತ ಹೆಚ್ಚು ಮಂದಿ ಇದನ್ನು ಬಳಸುತ್ತಾರೆ. ಈ ಆ್ಯಪ್ ಗಳು ರಹಸ್ಯವಾಗಿ ಜಾಹೀರಾತು ವೆಬ್ ಸೈಟ್ ನೊಂದಿಗೆ ಕಾರ್ಯನಿರ್ವಹಿಸುತ್ತದೆ. ಆ ಬಳಿಕ ಪೋನ್ ನಲ್ಲಿದ್ದ ಎಸ್ ಎಂ ಎಸ್, ಕಾಂಟ್ಯಾಕ್ಟ್ ಮತ್ತು ಇತರ ಮೂಲಗಳಿಂದ ಮಾಹಿತಿಯನ್ನು ಪಡೆದುಕೊಳ್ಳುತ್ತದೆ.

ಆ್ಯಂಡ್ರಾಯ್ಡ್ ಪೋನ್ ಗಳೇ ಹೆಚ್ಚಾಗಿ ಮಾಲ್ ವೇರ್ಗಳ ದಾಳಿಗೆ ಒಳಗಾಗುತ್ತಿವೆ. ಇತ್ತೀಚಿಗೆ ಜೋಕರ್ ಎಂಬ ಹೆಸರಿನ ವೈರಸ್ ಒಂದು ಹೆಚ್ಚಿನ ಪ್ಲೇ ಸ್ಟೋರ್ ಆ್ಯಪ್ ಗಳಲ್ಲಿ ಕಂಡುಬಂದಿತ್ತು. ಇದು ಸುಲಭವಾಗಿ ಬಳಕೆದಾರರರಿಂದ ಸೈನ್ ಅಪ್ ಮಾಡಿಸಿಕೊಂಡು ಬ್ಯಾಕ್ ಗ್ರೌಂಡ್ ನಲ್ಲಿ ಡಾಟಾ ಕದಿಯುವ ಕೆಲಸ ಮಾಡುತ್ತದೆ. ಈ ವೈರಸ್ ದಾಳಿಗೆ ಹಲವು ಜನರ ವೈಯಕ್ತಿಕ ಮಾಹಿತಿಗಳು ಸೋರಿಕೆಯಾಗಿದ್ದವು. ಜೊತೆಗೆ ಬ್ಯಾಂಕ್ ಖಾತೆಯಿಂದ ಸಾಕಷ್ಟು ಹಣ ವಿಥ್ ಡ್ರಾ ಆಗಿದ್ದವು. ಆ ಬಳಿಕ ಗೂಗಲ್ ಸಂಸ್ಥೆ ತನ್ನ  ಪ್ಲೇ ಸ್ಟೋರ್ ನಿಂದ ಈ ಆ್ಯಪ್ ಗಳನ್ನು ತೆಗೆದುಹಾಕಿತ್ತು.

ಇತ್ತೀಚಿನ ಸಮೀಕ್ಷೆಯೊಂದರ ಪ್ರಕಾರ ಸುಮಾರು 25 ಮಿಲಿಯನ್ ಆ್ಯಂಡ್ರಾಯ್ಡ್ ಫೋನ್ ಗಳು ವೈರಸ್ ದಾಳಿಗೆ ತುತ್ತಾಗಿದೆ. ಅದು ಕೂಡ ಪ್ರತಿನಿತ್ಯ ಬಳಸುವ ವಾಟ್ಸ್ಯಾಪ್ ಮತ್ತು ಇತರ ಆ್ಯಪ್ ಗಳಿಂದಲೇ  ಮಾಹಿತಿಗಳು ಸೋರಿಕೆಯಾಗುತ್ತಿದೆ.  ಮತ್ತೊಂದು ದುರಂತ ಎಂದರೇ ಭಾರತದಲ್ಲೇ 15 ಮಿಲಿಯನ್ ಜನರ ಫೋನ್ ಗಳಿಗೆ ಮಾಲ್ ವೇರ್ ಗಳು ಹೊಕ್ಕಿವೆ. ಇವಕ್ಕೆಲ್ಲಾ ಕಾರಣ ಆ್ಯಂಡ್ರಾಯ್ಡ್ ನಲ್ಲಿ ಸುರಕ್ಷತೆಗೆ ಸಂಬಂಧಿಸಿದ ಯಾವುದೇ ಅಂಶಗಳಿರದಿರುವುದು. ಮಾನವ ತಾನೇ ತನ್ನ ಬುದ್ದಿವಂತಿಕೆಯಿಂದ ಬೆಳೆಸಿದ ತಂತ್ರಜ್ಞಾನ  ಇಂದು ಆತನಿಗೇ  ಮುಳುವಾಗುತ್ತಿದೆ. ಒಂದು ವೈರಸ್ ಹೇಗೆ ಜೀವಿಗಳನ್ನು ಪ್ರವೇಶಿಸಿ ಇತರರಿಗೆ ಹರಡುತ್ತಾ ಹೋಗುತ್ತದೆಯೋ ಹಾಗೆ ಮಾಲ್ ವೇರ್ ಗಳಿಂದ ಕೂಡ. ಯಾವಾಗ ಮಾಹಿತಿ  ಸೋರಿಕೆಯಾಗುತ್ತದೆ ಎಂಬುದು ತಿಳಿಯುವುದಿಲ್ಲ. ಅದಕ್ಕಾಗಿ ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ.

ಮಾಲ್ ವೇರ್ ಭಾಧಿತ ಆ್ಯಪ್ ಗಳು ಜಾಹೀರಾತು ವೆಬ್ ಸೈಟ್ ನೊಂದಿಗೆ ಸಂವಹನ ಆರಂಭಿಸಲು ಪ್ರಚೋದನೆ ನೀಡುತ್ತದೆ. ಜ್ಯೂಡಿ ಮಾಲ್ ವೇರ್ ಎಂಬ ಹೆಸರಿನ ಮಾಲ್ ವೇರ್, ಈ ಹಿಂದೆ ಗೂಗಲ್ ಪ್ಲೇ ಸ್ಟೋರ್ ನಲ್ಲಿರುವ 40 ಕ್ಕೂ ಅಧಿಕ ಅಪ್ಲಿಕೇಶನ್ ಗಳ ಮೇಲೆ ದಾಳಿ ಮಾಡಿತ್ತು. ಈ ಅ್ಯಪ್ ಗಳನ್ನು ನಾವು ಡೌನ್ ಲೋಡ್, ಮಾಡಿದ್ದೇ ಆದರೇ ನಮ್ಮ ಸ್ಮಾರ್ಟ್ ಫೋನ್ ಗಳು ವೈರಸ್ ಗಳಿಗೆ ತುತ್ತಾಗುತ್ತದೆ, ಕ್ವಿಕ್ ಹೀಲ್ ಗುರುತಿಸಿದ ಹೊಸ ಮಾಲ್ ವೇರ್ ಗಳು  ವಾಟ್ಸ್ಯಾಪ್, ಫೇಸ್ ಬುಕ್, ಇನ್ ಸ್ಟಾಗ್ರಾಂ ಇನ್ನೀತರ ಪ್ರಸಿದ್ಧ ಜಾಲಾತಾಣಗಳು ಮತ್ತು ಬ್ಯಾಂಕಿಂಗ್ ಆ್ಯಪ್ ಗಳ ಮೂಲಕ ನೋಟಿಫೀಕೇಶನ್ ರೂಪದಲ್ಲಿ ಸ್ಮಾರ್ಟ್ ಪೋನ್ ಗಳನ್ನು ಸೇರುತ್ತಿವೆ.

Advertisement

ಮಾಲ್ ವೇರ್ ದಾಳಿಯಿಂದ ಪೋನನ್ನು ಸುರಕ್ಷಿತವಾಗಿಡುವುದು ಹೇಗೆ ?

  • ಇ-ಮೇಲ್ ಮತ್ತು ಎಸ್ ಎಂ ಎಸ್ ಗಳ ಮುಖಾಂತರ ಬರುವ ಅನಧಿಕೃತ ಲಿಂಕ್ ಗಳನ್ನು ಕ್ಲಿಕ್ ಮಾಡುವ  ಮುನ್ನ ಎಚ್ಚರ ವಹಿಸಿ
  • ಪ್ಲೇಸ್ಟೋರ್ ನಲ್ಲಿರುವ ಅಧಿಕೃತ ಆ್ಯಪ್ ಗಳನ್ನೇ ಬಳಸಿ
  • ಸುಲಭದ ಪಾಸ್ ವರ್ಡ್ ಬೇಡ. ಬದಲಾಗಿ ಹೆಚ್ಚು ಕ್ಲಿಷ್ಠಕರವಾಗಿರಲಿ.
  • ಕಾಲಕಾಲಕ್ಕೆ ಸ್ಮಾರ್ಟ್ ಫೋನ್ ಗಳ ಅಪ್ಡೇಟ್ ಮಾಡಿ.
  • ಜಾಹೀರಾತುಗಳ ಮೂಲಕ ಬರುವ ಲಿಂಕ್ ಗಳು ಕೂಡ ಹೆಚ್ಚಿನ ಸಂದರ್ಭದಲ್ಲಿ ಮಾಲ್ ವೇರ್ ಗಳಿಗೆ ಸಂಬಂಧ ಪಟ್ಟಿರುತ್ತದೆ.
  • ಅನುಮಾನಾಸ್ಪದ ಸಂದೇಶಗಳಿಂದ ಸಾಧ್ಯವಿರುವಷ್ಟು ದೂರವಿರಿ.

ಮಾಲ್​ ವೇರ್​ ವೈರಸ್ ದಾಳಿಯಿಂದ ​ಗೂಗಲ್ ಪ್ಲೇಸ್ಟೋರ್​ನಿಂದ ಇತ್ತೀಚಿಗೆ ತೆಗೆದು ಹಾಕಲ್ಪಟ್ಟ ಆ್ಯಪ್ ಗಳು ಇಂತಿವೆ:

  • ಬೀಚ್ ಕ್ಯಾಮರಾ 4.2
  • ಮಿನಿ ಕ್ಯಾಮರಾ 1.0.2
  • ಸರ್ಟನ್ ವಾಲ್ ಪೇಪರ್ 1.02
  • ರಿವಾರ್ಡ್ ಕ್ಲೀನ್ 1.1.6
  • ಏಜ್ ಫೇಸ್ 1.1.2
  • ಅಲ್ಟರ್ ಮೆಸೇಜ್ 1.5
  • ಸೋಬಿ ಕ್ಯಾಮರಾ 1.0.1
  • ಡಿಕ್ಲೇರ್ ಮೆಸೇಜ್ 10.02
  • ಡಿಸ್ ಪ್ಲೇ ಕ್ಯಾಮರ 1.02
  • ರ್ಯಾಪಿಡ್ ಫೇಸ್ ಸ್ಕ್ಯಾನರ್ 10.02
  • ಲೀಫ್ ಫೇಸ್ ಸ್ಕ್ಯಾನರ್ 1.0.3
  • ಬೋರ್ಡ್ ಪಿಕ್ಷರ್ ಎಡಿಟಿಂಗ್ 1.1.2
  • ಕ್ಯೂಟ್ ಕ್ಯಾಮರಾ 1.04
  • ಡ್ಯಾಜಲ್ ವಾಲ್ ಪೇಪರ್ 1.0.1
  • ಸ್ಪಾರ್ಕ್ ವಾಲ್ ಪೇಪರ್ 1.1.11
  • ಕ್ಲೈಮೇಟ್ ಎಸ್ ಎಂ ಎಸ್ 3.5
  • ಗ್ರೇಟ್ ವಿಪಿಎನ್ 2.0
  • ಹ್ಯೂಮರ್ ಕ್ಯಾಮರಾ 1.1.5
  • ಪ್ರಿಂಟ್ ಪ್ಲ್ಯಾಂಟ್ ಸ್ಕ್ಯಾನ್ 1.03
  • ಅಡ್ವೋಕೇಟ್ ವಾಲ್ ಪೇಪರ್ 1.1.9
  • ರೂಢಿ ಎಸ್ ಎಂ ಎಸ್ ಮೋಡ್
  • ಇಗ್ನೈಟ್ ಕ್ಲೀನ್ 7.3
  • ಆ್ಯಂಟಿವೈರಸ್ ಸೆಕ್ಯೂರಿಟಿ – ಸೆಕ್ಯೂರಿಟಿ ಸ್ಕ್ಯಾನ್ , ಅ್ಯಪ್ ಲಾಕ್ 1.1.2
  • ಕೊಲೇಟ್ ಫೇಸ್ ಸ್ಕ್ಯಾನರ್ 1.1.2

ಮಿಥುನ್ ಮೊಗೇರ

Advertisement

Udayavani is now on Telegram. Click here to join our channel and stay updated with the latest news.

Next