Advertisement

ಕಾಪಿ ಹೊಡೆದು ಡಿಬಾರ್ ಆದ್ರೆ 3 ವರ್ಷ ಎಕ್ಸಾಂ ಇಲ್ಲ;ಏನಿದು ಹೊಸ ವಿಧೇಯಕ

04:07 PM Mar 17, 2017 | Team Udayavani |

ಬೆಂಗಳೂರು:  ಭಾರತೀಯ ಜನತಾ ಪಕ್ಷ ಹಾಗೂ ಜೆಡಿಎಸ್ ಶಾಸಕರ ತೀವ್ರ ವಿರೋಧ ಹಾಗೂ ಸಭಾತ್ಯಾಗದ ನಡುವೆಯೇ ಶುಕ್ರವಾರ ಮೇಲ್ಮನೆಯಲ್ಲಿ ಕರ್ನಾಟಕ ಶಿಕ್ಷಣ ತಿದ್ದುಪಡಿ ಕಾಯ್ದೆ ಅಂಗೀಕಾರಗೊಂಡಿದೆ.

Advertisement

ಶಿಕ್ಷಣ ತಿದ್ದುಪಡಿ ವಿಧೇಯಕ ಜಾರಿಗೆ ಬಿಜೆಪಿ ಮತ್ತು ಜೆಡಿಎಸ್ ವಿರೋಧ ವ್ಯಕ್ತಪಡಿಸಿ ಸದಸ್ಯರು ಸಭಾತ್ಯಾಗ ಮಾಡಿದರು. ಸಭಾತ್ಯಾಗದ ನಡುವೆಯೇ ವಿಧೇಯಕ ಅಂಗೀಕಾರವಾಗಿದೆ.

ಈ ಕಾಯ್ದೆ ಎಸ್ಸೆಸ್ಸೆಲ್ಸಿ, ಪಿಯುಸಿ ವಿದ್ಯಾರ್ಥಿಗಳಿಗೆ ಅನ್ವಯವಾಗಲಿದೆ. ಕಾಯ್ದೆ ಪ್ರಕಾರ ಒಂದು ವೇಳೆ ಕಾಪಿ ಹೊಡೆದು ಡಿಬಾರ್ ಆದ್ರೆ 3 ವರ್ಷ ಪರೀಕ್ಷೆಗೆ ಕೂರುವಂತಿಲ್ಲ.

ವಿಧೇಯಕಕ್ಕೆ ಕಾರ್ಣಿಕ್ ತರಾಟೆ:
ಮಕ್ಕಳು ತಪ್ಪು ಮಾಡಿದ್ರೆ ಡಿಬಾರ್ ಮಾಡ್ತೀರಿ, ಅದೇ ಅಧಿಕಾರಿ ತಪ್ಪು ಮಾಡಿದ್ರೆ ಸಸ್ಪೆಂಡ್ ಮಾಡುತ್ತೀರಿ. ನಂತರ ಆತ ಏನೋ ಮಾಡಿ ಅದೇ ಸ್ಥಾನಕ್ಕೆ ಬಂದು ಕೂರುತ್ತಾನೆ. ಆ ಅಧಿಕಾರಿ 2ನೆ ಬಾರಿ ಅವಕಾಶ ಕೊಡುತ್ತೀರಿ. ಮಕ್ಕಳಿಗೆ ಶಿಕ್ಷೆ,ಅಧಿಕಾರಿಗೆ ರಕ್ಷೆ ಇದ್ಯಾವ ನ್ಯಾಯ ಎಂದು ವಿಧಾನಪರಿಷತ್ ಸದಸ್ಯ ಗಣೇಶ್ ಕಾರ್ಣಿಕ್ ಪ್ರಶ್ನಿಸಿದರು.

ತಪ್ಪು ಮಾಡಿದವರಿಗೆ ಶಿಕ್ಷೆ ಆಗಬೇಕೆಂದು ಕಾಯ್ದೆ ತಂದಿದ್ದೇವೆ: ಸೇಠ್
ತಪ್ಪು ಮಾಡಿದವರಿಗೆ ಶಿಕ್ಷೆ ಆಗಬೇಕೆಂಬ ಉದ್ದೇಶದಿಂದ ವಿಧೇಯಕ ಜಾರಿಗೆ ತರಲು ನಿರ್ಧರಿಸಲಾಗಿದೆ. ತಪ್ಪುಗಳು ಆಗಬಾರದು ಎಂಬ ಹಿನ್ನೆಲೆಯಲ್ಲಿ ಬಿಲ್ ತಂದಿದ್ದೇವೆ. ಉಪನ್ಯಾಸಕರು ತಪ್ಪೆಸಗಿದ್ದರು ಕೂಡ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ತನ್ವೀರ್ ಸೇಠ್ ಕಾರ್ಣಿಕ್ ಗೆ ಉತ್ತರ ನೀಡಿದರು.

Advertisement

ಏನಿದು ಶಿಕ್ಷಣ ವಿಧೇಯಕ ಮಸೂದೆ?
ಒಂದು ವೇಳೆ ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಕಾಪಿ ಹೊಡೆದು ಡಿಬಾರ್ ಆದ್ರೆ 3 ವರ್ಷ ಪರೀಕ್ಷೆ ಇಲ್ಲ.  ಪ್ರಶ್ನೆ  ಪತ್ರಿಕೆ ಸೋರಿಕೆ, ಕಾಪಿ ಹೊಡೆಯಲು ಕುಮ್ಮಕ್ಕು ನೀಡಿದ ಶಿಕ್ಷಕರು, ಮೇಲ್ವಿಚಾರಕರಿಗೆ ತಿದ್ದುಪಡಿ ವಿಧೇಯಕದಂತೆ 5 ವರ್ಷ ಜೈಲುಶಿಕ್ಷೆ.

Advertisement

Udayavani is now on Telegram. Click here to join our channel and stay updated with the latest news.

Next