Advertisement

ಎಸ್ಎಸ್ಎಲ್ ಸಿ ಪರೀಕ್ಷೆ: ಗೋಡೆ ಹಾರಿ ವಿದ್ಯಾರ್ಥಿಗಳಿಗೆ ಚೀಟಿ ಪೂರೈಕೆ!

05:44 PM Jun 25, 2020 | keerthan |

ಕಲಬುರಗಿ: ಕೋವಿಡ್-19 ಮಹಾಮಾರಿ‌ ಆತಂಕದ ನಡುವೆಯೂ ಎಸ್ಎಸ್ಎಲ್ ಸಿ ಪರೀಕ್ಷೆ ನಡೆಯುತ್ತಿದೆ. ಆದರೆ, ಪರೀಕ್ಷೆಗೆ ನಕಲು ಹಾವಳಿ ಮಾತ್ರ ತಪ್ಪಿಲ್ಲ.

Advertisement

ನಗರದ ಹಳೆ ಜೇವರ್ಗಿ ರಸ್ತೆಯಲ್ಲಿ ಲೋಕೋಪಯೋಗಿ ವಸತಿ ಗೃಹದ ಸಮೀಪವಿರುವ ಸರ್ಕಾರಿ ಪ್ರೌಢಶಾಲೆ ಪರೀಕ್ಷಾ ಕೇಂದ್ರದಲ್ಲಿ ಮೊದಲ ದಿನವೇ ನಕಲು ಚೀಟಿ ಪೂರೈಕೆ ಕಸರತ್ತು ನಡೆದಿದೆ.

ಯುವಕರು ಪರೀಕ್ಷಾ ಕೇಂದ್ರದ ಗೋಡೆ ಹಾರಿ ರಾಜಾರೋಷವಾಗಿ ವಿದ್ಯಾರ್ಥಿಗಳಿಗೆ ನಕಲು ಚೀಟಿ ನೀಡುತ್ತಿದ್ದಾರೆ. ಹೊರಗಡೆ ಯಾವುದೇ ಪೊಲೀಸರಿಲ್ಲದ್ದನ್ನು ನೋಡಿ ಯುವಕರು ಗೋಡೆ ಹಾರಿ ಚೀಟಿ ಪೂರೈಸುತ್ತಿದ್ದಾರೆ.

ವಿದ್ಯಾರ್ಥಿಗಳಿಗೆ ಯುವಕರು ಚೀಟಿ ಕೊಡುತ್ತಿದ್ದರೂ, ಪರೀಕ್ಷಾ ಸಿಬ್ಬಂದಿ ಇದಕ್ಕೆ ಕಡಿವಾಣ ಹಾಕಲು ವಿಫಲರಾಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ‌. ಅಲ್ಲದೇ, ಪರೀಕ್ಷಾ ಕೇಂದ್ರ ಸುತ್ತಮುತ್ತ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಘೋಷಿಸಿದ್ದರೂ  ಪ್ರಯೋಜನವಾಗಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next