Advertisement

Malpe ಷೇರು ಮಾರುಕಟ್ಟೆ ಹೂಡಿಕೆ: ವಂಚನೆ

12:52 AM May 09, 2024 | Team Udayavani |

ಮಲ್ಪೆ: ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡುವುದಾಗಿ ನಂಬಿಸಿ ಲಕ್ಷಾಂತರ ರೂ. ಬ್ಯಾಂಕ್‌ ಖಾತೆಗೆ ವರ್ಗಾಯಿಸಿ ಯಾವುದೇ ಲಾಭಾಂಶ ನೀಡಿದೆ ವಂಚನೆಗೈದಿರುವ ಬಗ್ಗೆ ಮಲ್ಪೆ ಠಾಣೆಯಲ್ಲಿ ದೂರು ದಾಖಲಾಗಿದೆ.

Advertisement

ಅರೋಪಿ ಅಭಿಷೇಕ್‌ ರಂಜನ್‌ ಕತಾರ್‌ನಲ್ಲಿ ವಾಸವಾಗಿರುವ ಡೋನೆಟ್‌ ರೋಶನ್‌ ಲಾಸ್ರಾದೋ ಅವರಿಗೆ ಷೇರು ಮಾರುಕಟ್ಟೆಯಲ್ಲಿ ಹಣ ಹೂಡಲು ಪ್ರೇರೆಪಿಸಿ ಮೋಸ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ರೋಶನ್‌ ಮೊದಲು ತನ್ನ ಅಕ್ಕ ಶಾಲಿನಿ ವೈಲೆಟ್‌ ಫೆರ್ನಾಂಡಿಸ್‌ ಖಾತೆಗೆ 5 ಲಕ್ಷ ರೂ. ಹಾಕಿ ಅದನ್ನು ಅಭಿಷೇಕ್‌ ರಂಜನ್‌ರ ಖಾತೆಗೆ ಹಾಕಲು ತಿಳಿಸಿದ್ದರು. ಅದರಂತೆ ಒಟ್ಟು 11.90 ಲಕ್ಷ ರೂ.ಗಳನ್ನು ಹೂಡಿಕೆ ಮಾಡಿದ್ದರು. ಇದುವರೆಗೂ ಲಾಭಾಂಶ ಕೊಡದೇ ಇನ್ನೂ ಹೆಚ್ಚು ಹೂಡಿಕೆ ಮಾಡುವಂತೆ ಪ್ರೇರೇಪಿಸಿ ಮೋಸ ಮಾಡಿದ್ದಾನೆ ಎಂದು ಶಾಲಿನಿ ವೈಲೆಟ್‌ ಮಲ್ಪೆ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next