Advertisement

ಸೀ ವಾಕ್‌ ವೇ: ಸಮುದ್ರದ ಅಲೆಗೆ ಬಂಡೆಕಲ್ಲು ಕುಸಿತ

02:05 AM Jun 22, 2018 | Karthik A |

ಮಲ್ಪೆ: ಕರ್ನಾಟಕದ ಮೊತ್ತ ಮೊದಲನೇ ಎಂಬ ಹೆಗ್ಗಳಿಕೆಗೆ ಪಾತ್ರವಾದ, ಮಲ್ಪೆ ಮೀನುಗಾರಿಕೆ ಬಂದರಿನ ಪಶ್ಚಿಮ ದಿಕ್ಕಿನ (ಸೈಂಟ್‌ ಮೇರಿ ದ್ವೀಪಯಾನದ ಸ್ಟಾರ್ಟಿಂಗ್‌ ಪಾಯಿಂಟ್‌) ಬ್ರೇಕ್‌ ವಾಟರ್‌ ಮೇಲೆ ನಿರ್ಮಾಣಗೊಂಡ ಸೀ ವಾಕ್‌ ವೇನಲ್ಲಿ ಸುಮಾರು 200 ಮೀಟರ್‌ ಮುಂದಕ್ಕೆ ಬಲಭಾಗದಲ್ಲಿ ಹೊಂದಿಕೊಂಡಿರುವ ಬಂಡೆಕಲ್ಲು ಸಮುದ್ರದ ಅಲೆಗೆ ಜರಿದು ಹೋದ ಸ್ಥಿತಿಯಲ್ಲಿದೆ.

Advertisement

ಮಲ್ಪೆ ಅಭಿವೃದ್ಧಿ  ಸಮಿತಿಯ ವತಿಯಿಂದ ಸುಮಾರು 55.5 ಲ. ರೂ. ವೆಚ್ಚದಲ್ಲಿ 480 ಮೀ. ಉದ್ದ, 8.5 ಅಡಿ ಅಗಲದಲ್ಲಿ ನಿರ್ಮಾಣಗೊಂಡಿದೆ. ಇದು 2018ರ ಜನವರಿ 26ರಂದು ಉದ್ಘಾಟನೆಗೊಂಡಿದ್ದು ಅಂದಿನಿಂದಲೂ ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸುತ್ತಿದ್ದು ಪ್ರವಾಸಿಗರ ನೆಚ್ಚಿನ ತಾಣವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next