Advertisement

ಕೋವಿಡ್‌ 19 ಭೀತಿ; ಪ್ರವಾಸಿಗರಿಲ್ಲದೆ ಟೂರಿಸ್ಟ್‌ ಬೋಟ್‌ ಯಾನ ಸ್ಥಗಿತ

11:49 PM Mar 18, 2020 | Sriram |

ಮಲ್ಪೆ: ಮಲ್ಪೆಸೈಂಟ್‌ಮೇರಿ ದ್ವೀಪದಲ್ಲಿ ಕಳೆದ ಒಂದು ವಾರದಿಂದ ಪ್ರವಾಸಿಗರು ಬಾರದ ಕಾರಣ ಮಲ್ಪೆ ಸೀವಾಕ್‌ ಬಳಿ ತೆರಳುವ ಟೂರಿಸ್ಟ್‌ ಬೋಟುಗಳು ಬುಧವಾರದಿಂದ ಪ್ರಯಾಣವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿವೆ.

Advertisement

ಕೋವಿಡ್‌ 19 ಭೀತಿಯ ಹಿನ್ನೆಲೆಯಲ್ಲಿ ಪ್ರವಾಸಿ ತಾಣಗಳಿಗೆ ಪ್ರವಾಸಿಗರ ಸಂಖ್ಯೆ ಇಳಿಮುಖವಾಗಿದೆ. ಪ್ರತಿದಿನ ಸಾವಿರಾರು ಪ್ರವಾಸಿಗರನ್ನು ಕಾಣುತ್ತಿದ್ದ ಐಲ್ಯಾಂಡ್‌ ಖಾಲಿ ಖಾಲಿಯಾಗಿದ್ದು, ಒಂದು ವಾರದಿಂದ ದ್ವೀಪಕ್ಕೆ ಪ್ರವಾಸಿಗರು ಬರುವುದೇ ನಿಂತು ಹೋಗಿತ್ತು.

ಕೋವಿಡ್‌ 19 ಆತಂಕ ಶುರುವಾದ ಅನಂತರ ಈ ಮೊದಲೇ ಪ್ರವಾಸವನ್ನು ನಿಗದಿಪಡಿಸಿದ್ದ ಪ್ರವಾಸಿಗರು ತಮ್ಮ ಪ್ರವಾಸವನ್ನು ಮೊಟುಕುಗೊಳಿಸಿದ್ದಾರೆ. ದ್ವೀಪಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಕೇರಳದ ಪ್ರವಾಸಿಗರು 10 ದಿನದ ಮೊದಲೇ ನಿಂತಿದೆ. ಹಾಗಾಗಿ ಇಲ್ಲಿರುವ ಮೂರು ದೊಡ್ಡ ಟೂರಿಸ್ಟ್‌ ಬೋಟ್‌ಗಳಿಗೆ ದಿನಕ್ಕೆ ಒಂದು ಯಾನವನ್ನು ಮಾಡಲು ಸಾಧ್ಯವಾಗದೇ ಜೆಟ್ಟಿ ಬಳಿ ಲಂಗರು ಹಾಕಿವೆ.

ತಾತ್ಕಾಲಿಕವಾಗಿ ಸ್ಥಗಿತ
ಕೋವಿಡ್‌ 19 ಮುನ್ನೆಚ್ಚರಿಕೆ ವಹಿಸುವ ಸಲುವಾಗಿ ಸರಕಾರವು ಕೂಡ ಹೆಚ್ಚು ಜನರು ಸೇರುವ ಪ್ರವಾಸಿ ತಾಣಗಳಿಗೆ ನಿರ್ಬಂಧವನ್ನು ಹೇರುವ ಹಿನ್ನೆಲೆಯಲ್ಲಿ , ಸೀವಾಕ್‌ ಸಮೀಪ ತೆರಳುವ ಮೂರು ಬೋಟುಗಳ ಯಾನವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದೇವೆ. ಕೋವಿಡ್‌ 19 ಪ್ರಭಾವ ಕಡಿಮೆಯಾದ ಮೇಲೆ ಮತ್ತೆ ಬೋಟ್‌ ಯಾನವನ್ನು ಆರಂಭಿಸಲಾಗುವುದು.
-ಗಣೇಶ್‌ ಅಮೀನ್‌ ಮಲ್ಪೆ, ರಾಜರಾಜೇಶ್ವರಿ ಟೂರಿಸ್ಟ್‌ ಬೋಟ್‌

Advertisement

Udayavani is now on Telegram. Click here to join our channel and stay updated with the latest news.

Next