Advertisement

ಮಲ್ಪೆ ಸೈಂಟ್‌ ಮೇರೀಸ್‌ ಐಲ್ಯಾಂಡ್‌; ದ್ವೀಪದ ನಿರ್ವಹಣೆಗೆ ಆಗಬೇಕಿದೆ ಟೆಂಡರ್‌

10:28 PM Nov 01, 2020 | mahesh |

ಮಲ್ಪೆ: ಸೈಂಟ್‌ ಮೇರೀಸ್‌ ದ್ವೀಪಕ್ಕೆ ಮಳೆಗಾಲದ ಪ್ರವಾಸಿಗರ ಭೇಟಿ ನಿರ್ಬಂಧದ ಅವಧಿ ತೆರವಾಗಿದ್ದು, ಕಳೆದ ವಾರದಿಂದ ಮತ್ತೆ ದ್ವೀಪಯಾನ ಆರಂಭವಾಗಿದೆ. ಆದರೆ ದ್ವೀಪ ನಿರ್ವಹಣೆಯ ಟೆಂಡರ್‌ ಪ್ರಕ್ರಿಯೆ ಇನ್ನೂ ಆಗದೇ ಮೂಲ ಸೌಕರ್ಯದ ವ್ಯವಸ್ಥೆಯಾಗಲಿ, ಜಲ ಸಾಹಸ ಕ್ರೀಡೆಗಳಾಗಲಿ ಇನ್ನೂ ಆರಂಭಗೊಂಡಿಲ್ಲ.

Advertisement

ಈಗಾಗಲೇ ಸೈಂಟ್‌ಮೇರೀಸ್‌ ದ್ವೀಪ ನಿರ್ವಹಣೆ ಹೊತ್ತಿದ್ದ ಟೆಂಡರ್‌ ಅವಧಿ ಮುಗಿದಿದ್ದು, ಹೊಸ ಟೆಂಡರನ್ನು ಕರೆಯಲಾಗಿದೆ. ಮಲ್ಪೆ ಬೀಚ್‌, ಸೀವಾಕ್‌ ಮತ್ತು ಸೈಂಟ್‌ ಮೇರೀಸ್‌ ದ್ವೀಪದ ನಿರ್ವಹಣೆಗೆ ಪ್ರತ್ಯೇಕ ಟೆಂಡರ್‌ ಕರೆಯಲಾಗಿದ್ದು, ಅದರಲ್ಲಿ ಮಲ್ಪೆ ಬೀಚ್‌ ಈಗಾಗಲೇ ಟೆಂಡರ್‌ ವಹಿಸಿಕೊಡಲಾಗಿದೆ.

ಸೀವಾಕ್‌ ಬಳಿ ಅಭಿವೃದ್ಧಿ ಕೆಲಸಗಳು ನಡೆಯುತ್ತಿದ್ದು ಹಾಗಾಗಿ ಸೀವಾಕ್‌ ಮತ್ತು ಸೈಂಟ್‌ಮೇರೀಸ್‌ದ್ವೀಪದ ಟೆಂಡರ್‌ ಒಟ್ಟಿಗೆ ಆಗುತ್ತಿದೆ. ಆ ಬಳಿಕವಷ್ಟೆ ದ್ವೀಪದಲ್ಲಿ ಎಲ್ಲ ಚುಟುವಟಿಕೆಗಳು ಪೂರ್ಣ ಪ್ರಮಾಣದಲ್ಲಿ ಆರಂಭಗೊಳ್ಳಲಿದೆ ಎನ್ನಲಾಗಿದೆ. ಶೀಘ್ರದಲ್ಲಿ ದ್ವೀಪದಲ್ಲಿ ಕುಡಿಯುವ ನೀರು, ಶೌಚಾಲಯ, ಸೇರಿದಂತೆ ಮೂಲ ಸೌಕರ್ಯ ಕಲ್ಪಿಸಬೇಕಾಗಿದೆ ಎಂದು ಪ್ರವಾಸಿಗರು ಆಗ್ರಹಿಸಿದ್ದಾರೆ.

ಎರಡೂ ಕಡೆ ಬೋಟ್‌ ಸಂಚಾರ ಆರಂಭ
ಈಗಾಗಲೇ ಮಲ್ಪೆ ಸೀವಾಕ್‌ ಬಳಿ ಪ್ರಮುಖವಾಗಿ 3 ದೊಡ್ಡ ಟೂರಿಸ್ಟ್‌ ಬೋಟ್‌, ಮಲ್ಪೆ ಬೀಚ್‌ನಲ್ಲಿ 4 ಸೀ³ಡ್‌ ಬೋಟ್‌ಗಳು ಸಿದ್ದಗೊಂಡು ಯಾನವನ್ನು ಆರಂಭಿಸಿವೆ. ಈ ಹಿಂದಿನ ವರ್ಷ ಸೆ. 15ರಿಂದಲೇ ಯಾನ ಆರಂಭವಾಗಿತ್ತು. ಈ ಬಾರಿ ಕೊರೊನಾ ಮಾರ್ಗಸೂಚಿ ಅನ್ವಯವಿಳಂಬವಾಗಿ ಪ್ರಾರಂಭಿಸ ಲಾಗಿದೆ. ಪ್ರತೀ ಪ್ರವಾಸಿ ಬೋಟು ಲೈಫ್‌ಜಾಕೆಟ್‌, ಲೈಫ್‌ಬಾಯ್‌, ಪ್ರಥಮ ಚಿಕಿತ್ಸೆ ವ್ಯವಸ್ಥೆ, ನುರಿತ ಈಜುಗಾರರು ಸೇರಿದಂತೆ ಸುರಕ್ಷಿತ ಸಾಧನಗಳನ್ನು ಹೊಂದಿದೆ. ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಪ್ರತಿಯೊಬ್ಬರೂ ಲೈಫ್‌ ಜಾಕೇಟನ್ನು ಖಡ್ಡಾಯವಾಗಿ ಧರಿಸಬೇಕು ಎಂದು ಪ್ರವಾಸಿ ಬೋಟ್‌ನ ನಿರ್ವಾಹಕರಾದ ಗಣೇಶ್‌ ಅಮೀನ್‌ ಮತ್ತು ಸನತ್‌ ಸಾಲ್ಯಾನ್‌ ತಿಳಿಸಿದ್ದಾರೆ.

ವಾರದೊಳಗೆ ಟೆಂಡರ್‌ ಪ್ರಕ್ರಿಯೆ ಪೂರ್ಣ
ಮಲ್ಪೆ ಬೀಚ್‌, ಸೀವಾಕ್‌ ಮತ್ತು ಸೈಂಟ್‌ ಮೇರಿ ದ್ವೀಪದ ನಿರ್ವಹಣೆಗೆ ಪ್ರತ್ಯೇಕ ಟೆಂಡರ್‌ ಕರೆಯಲಾಗಿದ್ದು ಈ ಪೈಕಿ ಮಲ್ಪೆ ಬೀಚ್‌ ಟೆಂಡರ್‌ ಆಗಿದೆ. ಸೀವಾಕ್‌ ಮತ್ತು ಸೈಂಟ್‌ಮೇರಿ ಟೆಂಡರ್‌ ಪ್ರಕ್ರಿಯೆ ಪ್ರಗತಿಯಲ್ಲಿದೆ. ಒಂದು ವಾರದೊಳಗೆ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.
-ಆನಂದ ಸಿ. ಕಲ್ಲೋಳಿಕರ್‌, ಪೌರಾಯುಕ್ತ, ಉಡುಪಿ ನಗರಸಭೆ

Advertisement
Advertisement

Udayavani is now on Telegram. Click here to join our channel and stay updated with the latest news.

Next