Advertisement

ಮಲ್ಪೆ-ಕೊಳ: ಚರಂಡಿ ಹೂಳು ತೆರವಿಗೆ ಆಗ್ರಹ

11:26 PM May 31, 2019 | Sriram |

ಮಲ್ಪೆ: ಇಲ್ಲಿನ ಕೊಳದಿಂದ ಬೀಚ್ ಹೋಗುವ ಪ್ರಮುಖ ರಸ್ತೆಯ ಬದಿಯ ಚರಂಡಿಯಿಂದ ಮೇಲೆತ್ತಿದ ಹೂಳನ್ನು ಚರಂಡಿ ಪಕ್ಕದಲ್ಲಿ ಹಾಕಲಾಗಿದ್ದು ಇದುವರೆಗೂ ತೆರವುಗೊಳಿಸುವ ಕಾರ್ಯ ಮಾತ್ರ ಇನ್ನೂ ನಡೆದಿಲ್ಲ.

Advertisement

ನಗರಸಭೆಯ 10 ದಿನಗಳ ಹಿಂದೆ ಇಲ್ಲಿನ ಚರಂಡಿಗಳಲ್ಲಿ ತುಂಬಿದ್ದ ಹೂಳು ತೆಗೆಯುವ ಕಾರ್ಯ ನಡೆಸಿದ್ದರೂ ಪೂರ್ಣಗೊಳಿಸಿದೆ ಅರ್ಧದಲ್ಲೇ ಕೈಬಿಟ್ಟು ಹೋಗಿದೆ.

ಅರ್ಧ ತೆಗೆದ ಚರಂಡಿಯ ಹೂಳನ್ನು ಕೂಡ ಪಕ್ಕದ ಖಾಸಗಿ ಸ್ಥಳದಲ್ಲಿ ಸುರಿದು ಹೋಗಿದ್ದು, ಮಳೆ ಬಂದರೆ ಮಣ್ಣು ಮತ್ತೆ ಚರಂಡಿ ಸೇರಲಿದೆ. ದೂರು ನೀಡಿದರೂ ಸಂಬಂಧಪಟ್ಟವರು ನಿರ್ಲಕ್ಷ ್ಯವಹಿಸುತ್ತಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಮನವಿ ನೀಡಲಾಗಿದೆ
ಈ ಬಗ್ಗೆ ಸಾಕಷ್ಟು ಬಾರಿ ದೂರು ಬಂದಿರುವ ಹಿನ್ನೆಲೆಯಲ್ಲಿ ಇಲ್ಲಿನ ಹೂಳನ್ನು ತೆರವುಗೊಳಿಸಬೇಕೆಂದು ಜನಪ್ರತಿನಿಧಿಗೆ, ಜಿಲ್ಲಾಧಿಕಾರಿ, ನಗರಸಭೆ ಪೌರಾಯುಕ್ತ, ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಮನವಿ ಮಾಡಲಾಗಿತ್ತು. ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಹಿಟಾಚಿ ಇಲ್ಲ. ಟಿಪ್ಪರ್‌ ಇಲ್ಲ ಎಂದು ಸಬೂಬು ನೀಡುತ್ತಾರೆ. –ಎಡ್ಲಿನ್‌ ಕರ್ಕಡ, ನಗರಸಭಾ ಸದಸ್ಯರು, ಮಲ್ಪೆ ಸೆಂಟ್ರಲ್ ವಾರ್ಡ್‌

Advertisement

Udayavani is now on Telegram. Click here to join our channel and stay updated with the latest news.

Next