Advertisement
ಮಳೆಗಾಲದಲ್ಲಿ ಸಮುದ್ರದ ಅಬ್ಬರ ಹೆಚ್ಚಾಗಿರುವುದರಿಂದ ದ್ವೀಪಕ್ಕೆ ತೆರಳುವುದು ಅಪಾಯಕಾರಿ ಎಂದು ಪ್ರತೀ ವರ್ಷ ಮೇ 15ರಿಂದ ಸೆ. 15ರ ವರೆಗೆ ಇಲ್ಲಿನ ಪ್ರವೇಶಕ್ಕೆ ಜಿಲ್ಲಾಡಳಿತ ನಿರ್ಬಂಧ ಹೇರುತ್ತದೆ. ಆದರೆ ಕಳೆದ ಎರಡು ವರ್ಷಗಳಿಂದ ಕೊರೊನಾ ಲಾಕ್‌ಡೌನ್‌ನಿಂದಾಗಿ ನಿಗದಿತ ನಿಷೇಧದ ಅವಧಿಯ ಮೊದಲೇ ಪ್ರವಾಸಿ ಬೋಟ್‌ಗಳು ಪ್ರಯಾಣವನ್ನು ಅರ್ಧದಲ್ಲೇ ಸ್ಥಗಿತಗೊಳಿಸಿತ್ತು. ಸೆ. 19ರಿಂದ ಮತ್ತೆ ಬೋಟ್ ಯಾನ ಆರಂಭಗೊಂಡಿದ್ದು ಪ್ರವಾಸಿಗರನ್ನು ಕರೆದೊಯ್ಯಲು ಸಿದ್ಧªವಾಗಿದೆ.
Related Articles
Advertisement
ಇನ್ನು ಮಲ್ಪೆ ಬೀಚ್‌ನಿಂದ ದ್ವೀಪಕ್ಕೆ ಹೋಗಲು 4 ಪ್ರವಾಸಿ ಸ್ಪೀಡ್ ಬೋಟ್‌ಗಳಿದ್ದು, ಒಂದು ಬೊಟ್‌ನಲ್ಲಿ 10 ಮಂದಿಗೆ ಮಾತ್ರ ತೆರಳಲು ಅವಕಾಶವಿದೆ. ಇದರಿಂದ ಕೇವಲ 15 ನಿಮಿಷಗಳಲ್ಲಿ ತಲುಪಬಹುದಾಗಿದೆ.
ಅ. 1ರಿಂದ ವಾಟರ್ ಸ್ಪೋರ್ಟ್ಸ್ ಆರಂಭ:
ಜಲಸಾಹಸ ಕ್ರೀಡೆಗಳು, ಫುಡ್‌ಕೋರ್ಟ್, ಲಗೇಜ್ ರೂಮ್, ಶೌಚಾಲಯ ಸೇರಿದಂತೆ ಪೂರ್ಣ ಪ್ರಮಾಣದ ಸೌಲಭ್ಯಗಳೊಂದಿಗೆ ಅ. 1ರಿಂದ ಐಲ್ಯಾಂಡ್ ಪ್ರವಾಸಿಗರಿಗೆ ತೆರೆದುಕೊಳ್ಳಲಿದೆ. ಪ್ರವಾಸಿಗರಿಗೆ ಕುಳಿತುಕೊಳ್ಳಲು ಮರದ ಬೆಂಚು, ನೆರಳಿಗಾಗಿ ಶೆಲ್ಟರ್, ಪ್ರವೇಶ ದ್ವಾರವನ್ನು ನಿರ್ಮಿಸುವ ಇನ್ನಿತರ ಕೆಲಸ ಕಾರ್ಯಗಳು ನಡೆಯುತ್ತಿವೆ.
2 ಕಡೆ ಬೋಟಿನ ವ್ಯವಸ್ಥೆ :
ಮಲ್ಪೆ ಸೀವಾಕ್ ಬಳಿ, ಮಲ್ಪೆ ಬೀಚ್ ಎರಡೂ ಕಡೆಯಲ್ಲೂ ಐಲ್ಯಾಂಡ್‌ಗೆ ತೆರಳಲು ಪ್ರವಾಸಿ ಬೋಟಿನ ವ್ಯವಸ್ಥೆ ಇದೆ. ಆಧುನಿಕ ಸೌಕರ್ಯದೊಂದಿಗೆ, ಲೈಫ್ ಜಾಕೆಟ್, ಲೈಫ್‌ಬಾಯ್, ಪ್ರಥಮ ಚಿಕಿತ್ಸೆ ವ್ಯವಸ್ಥೆ, ನುರಿತ ಈಜುಗಾರರನ್ನೊಳ ಗೊಂಡ ರಕ್ಷಣ ತಂಡವನ್ನು ಹೊಂದಿದೆ. ಸೀವಾಕ್ ಬಳಿ ದ್ವೀಪಕ್ಕೆ ತೆರಳಲು 4 ದೊಡ್ಡ ಬೋಟುಗಳಿದ್ದು, ಇದರಲ್ಲಿ ಸುಮಾರು 120 ಮಂದಿ ಕರೆದೊಯ್ಯುವ ಸಾಮರ್ಥ್ಯವನ್ನು ಹೊಂದಿದೆ. ದ್ವೀಪಕ್ಕೆ ತೆರಳಲು ಕನಿಷ್ಠ 30 ಮಂದಿಯಾದರೂ ಭರ್ತಿಯಾಗಬೇಕು. ಬೆಳಗ್ಗೆ 10.30 ಮತ್ತು ಅಪರಾಹ್ನ 3.30ಕ್ಕೆ ರೆಗ್ಯುಲರ್ ಟ್ರಿಪ್ ಆಲ್ಲದೆ ಅಪಾರ ಸಂಖ್ಯೆಯಲ್ಲಿ ಪ್ರವಾಸಿಗರು ಬಂದರೆ ಬೆಳಗ್ಗೆ 9ರಿಂದ ಸಂಜೆ 5ರ ವರೆಗೂ ನಿರಂತರವಾಗಿರುತ್ತದೆ.