Advertisement

ಮಲ್ಪೆ: ಸಾಲದ ಆಮಿಷ- ಮಹಿಳೆಯರಿಂದ ಲಕ್ಷಾಂತರ ರೂ. ಪಡೆದು ವಂಚನೆ; ದೂರು ದಾಖಲು

10:20 AM Jul 26, 2023 | Team Udayavani |

ಉಡುಪಿ: ಖಾಸಗಿ ಫೈನಾನ್ಸ್‌ ನಲ್ಲಿ ಲೋನ್‌ ಆಫೀಸರ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದ ದಿಲೀಪ್‌ ಎಸ್.‌ ಎಸ್‌ ಎಂಬಾತ ಬಡ ಮಹಿಳೆಯರು ಸಂಘದಿಂದ ಸಾಲವಾಗಿ ಪಡೆದುಕೊಂಡ ಹಣಕ್ಕೆ ಹೆಚ್ಚಿನ ಸಾಲ ಕೊಡುವುದಾಗಿ ನಂಬಿಸಿ ಲಕ್ಷಾಂತರ ರೂಪಾಯಿ ಹಣ ಪಡೆದು ವಂಚಿಸಿರುವುದಾಗಿ ಬ್ರ್ಯಾಂಚ್‌ ಮೆನೇಜರ್‌ ಸುಂದರ್‌ ಶೆಟ್ಟಿ ಎಂಬವರು ಮಲ್ಪೆ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿರುವುದಾಗಿ ವರದಿಯಾಗಿದೆ.‌

Advertisement

ಇದನ್ನೂ ಓದಿ:Chandrayaan 3: ಚಂದ್ರಯಾನ-3ರ 5ನೇ ಹಂತ ಯಶಸ್ವಿ-ದಕ್ಷಿಣದತ್ತ ಪಯಣ: ಇಸ್ರೋ

ದಿಲೀಪ್‌ 27/11/2021ರಿಂದ 23/06/2023ರವರೆಗೆ ಮಹಿಳಾ ಸಂಘದ ಸದಸ್ಯರಿಂದ ಸುಮಾರು 11,88,878 ರೂಪಾಯಿ ಹಣವನ್ನು ವಸೂಲಿ ಮಾಡಿ ಅದನ್ನು ಬ್ಯಾಂಕ್‌ ಗೆ ಕಟ್ಟದೇ ತನ್ನ ಸ್ವಂತಕ್ಕೆ ಬಳಸಿಕೊಂಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

ಫೈನಾನ್ಸ್ ಶಾಖೆಗೆ 11,88,878 ರೂಪಾಯಿ ವಂಚಿಸಿರುವುದಾಗಿ ಮಲ್ಪೆ ಠಾಣೆಯಲ್ಲಿ ದೂರು ದಾಖಲಾಗಿದ್ದು, ಅದರಂತೆ ದಿಲೀಪ್‌ ವಿರುದ್ಧ ಐಪಿಸಿ ಸೆಕ್ಷನ್‌ 406, 409, 420ರ ಅಡಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next