Advertisement
ಬೀದಿಗಳಲ್ಲಿ ಜನರೂ ಸಹ ಬೆಳಗುತ್ತಿರುವ ದೀಪವನ್ನು ನೋಡಿಕೊಂಡು ಹೋಗುತ್ತಾರೆ. ಈ ಬಗ್ಗೆ ಇಲ್ಲಿನ ಭಜನಾ ಮಂದಿರದ ಸದಸ್ಯರು ಸಂಬಂಧಪಟ್ಟವರಿಗೆ ಹಲವು ಬಾರಿ ದೂರು ನೀಡಿದರೂ ಇಲಾಖೆಯೂ ತಲೆ ಕೆಡಿಸಿಕೊಳ್ಳುತ್ತಿಲ್ಲ ಎನ್ನಲಾಗಿದೆ. ಇಲ್ಲಿಗೆ ಸಮೀಪದ ಒಂದೆರೆಡು ಕಡೆಗಳಲ್ಲಿ ಬೀದಿ ದೀಪ ಕೆಟ್ಟು ಹೋಗಿದ್ದು ದುರಸ್ತಿಗಾಗಿ ಮನವಿ ಮಾಡಿದರೂ ಪ್ರಯೋಜನ ಇಲ್ಲವಾಗಿದೆ ಎಂದು ನಾಗರಿಕರು ಆರೋಪಿಸಿದ್ದಾರೆ.
ಇಲ್ಲಿನ ದಾರಿದೀಪಕ್ಕೆ ಅಳವಡಿಸಲಾದ ಟೈಮರ್ ಶಾರ್ಟ್ ಆಗಿರಬೇಕು, ಹಾಗಾಗಿ ಆನ್‌ಆಫ್ ಆಗುತ್ತಿಲ್ಲ. ಇಲ್ಲಿನ ದಾರಿದೀಪಗಳ ನಿರ್ವಹಣೆ ನಗರಸಭೆಗೆ ಸಂಬಂಧಪಟ್ಟಿರುತ್ತದೆ. ಹಗಲು ಹೊತ್ತಿನಲ್ಲಿ ದಾರಿದೀಪ ಉರಿಯುತ್ತಿರುವ ಬಗ್ಗೆ ನಮ್ಮ ಗಮನಕ್ಕೆ ಬಂದಲ್ಲಿ ನಾವೂ ಕೂಡ ಬಂದ್ ಮಾಡುತೇ¤ವೆ.
– ಕೃಷ್ಣಮೂರ್ತಿ, ಸೆಕ್ಷನ್ ಆಫೀಸರ್, ಮೆಸ್ಕಾಂ,ಮಲ್ಪೆ