Advertisement
ಆ. 1ರಿಂದ ಯಾಂತ್ರಿಕ ಮೀನು ಗಾರಿಕೆ ಆರಂಭಕ್ಕೆ ಅವಕಾಶವಿದ್ದರೂ ಬಿರುಸಾದ ಮಳೆಗಾಳಿಯಿಂದಾಗಿ ಯಾರೂ ಸಮುದ್ರಕ್ಕೆ ಇಳಿದಿರಲಿಲ್ಲ. ಈಗ ಮಳೆಯ ಅಬ್ಬರ ತಗ್ಗಿದ್ದು, ನಾಗಪಂಚಮಿಯಂದು ಬಹುತೇಕ ಆಳಸಮುದ್ರ ಬೋಟುಗಳು ಮೀನುಗಾರಿಕೆಗೆ ತೆರಳಿವೆ.
ದಿದ್ದು, ರವಿವಾರದೊಳಗೆ ಶೇ.50ರಷ್ಟು ಬೋಟುಗಳು ನೀರಿಗಿಳಿದಿವೆ.
Related Articles
ಹವಾಮಾನ ವೈಪರೀತ್ಯದಿಂದಾಗಿ ಈ ಬಾರಿ ನಾಡದೋಣಿ ಮೀನುಗಾರಿಕೆಗೆ ಹಿನ್ನೆಡೆಯಾಗಿದೆ. ಈ ಬಾರಿ ಪಟ್ಟೆಬಲೆ, ಡಿಸ್ಕೋ ಮೀನುಗಾರಿಕೆಗೆ ಉತ್ತಮ ಅವಕಾಶ ಸಿಕ್ಕಿರಲಿಲ್ಲ. ವಾರದಿಂದ ನಾಡದೋಣಿಗಳು ನೀರಿಗಿಳಿದಿದ್ದರೂ ಹೇಳಿಕೊಳ್ಳುವಷ್ಟು ಮೀನು ಸಿಕ್ಕಿರಲಿಲ್ಲ. ಈಗ ಮೀನುಗಾರರು ಆಳಸಮುದ್ರ ಬೋಟಿನಲ್ಲಿ ದುಡಿಯುತ್ತಿರುವುದರಿಂದ ನಾಡದೋಣಿ ಮೀನುಗಾರಿಕೆಗೆ ಮುಕ್ತಾಯ ಹಾಡಬೇಕಾಗಿದೆ. ಮಳೆಗಾಲದಲ್ಲಿ ನಾಡದೋಣಿಗೆ ಸಾಕಷ್ಟು ಪ್ರಮಾಣದಲ್ಲಿ ಮೀನು ಲಭ್ಯವಾಗದ ಕಾರಣ ಯಾಂತ್ರಿಕ ಮೀನುಗಾರಿಕೆಗೆ ಹೇರಳ ಮತ್ಸé ಸಂಪತ್ತು ದೊರಕಬಹುದು ಎನ್ನುವ ವಿಶ್ವಾಸ ಮೀನುಗಾರರಲ್ಲಿದೆ.
Advertisement
ಆ. 19: ಸಮುದ್ರಪೂಜೆ, ರಜೆಮಲ್ಪೆ ಮೀನುಗಾರರ ಸಂಘದ ವತಿಯಿಂದ ಆ. 19ರಂದು ಸಮುದ್ರಪೂಜೆ ನಡೆಯಲಿದೆ. ಬೆಳಗ್ಗೆ 8ಕ್ಕೆ ವಡಭಾಂಡೇಶ್ವರ ಬಲರಾಮ ದೇವಸ್ಥಾನದಲ್ಲಿ ಪ್ರಾರ್ಥನೆ, ಬಳಿಕ ಮೆರವಣಿಗೆಯೊಂದಿಗೆ ಸಾಗಿ ಸಮುದ್ರತೀರದಲ್ಲಿ ಪೂಜೆ ನಡೆಯಲಿದೆ. ಅಂದು ಬಂದರಿನ ಮೀನುಗಾರಿಕೆ ಚಟುವಟಿಕೆಗಳಿಗೆ ರಜೆ ಸಾರಲಾಗಿದೆ.