Advertisement

Malpe: ಉಡುಪಿ ಕೊಚ್ಚಿನ್‌ ಶಿಪ್‌ಯಾರ್ಡ್‌ನಿಂದ ಕಾರ್ಗೋ ಶಿಪ್‌ ನಾರ್ವೆಗೆ ಹಸ್ತಾಂತರ

01:51 AM Dec 17, 2024 | Team Udayavani |

ಉಡುಪಿ: ಮಲ್ಪೆಯ ಉಡುಪಿ-ಕೊಚ್ಚಿನ್‌ ಶಿಪ್‌ ಯಾರ್ಡ್‌ ಲಿ. ನಲ್ಲಿ ನಿರ್ಮಾಣಗೊಂಡಿರುವ 3800 ಟಿಡಿಡಬ್ಲ್ಯು ಸಾಮರ್ಥ್ಯದ ಸಾಮಾನ್ಯ ಸರಕು ಸಾಗಾಟದ ಹಡಗು (ಜನರಲ್‌ ಕಾರ್ಗೋ) ಒಪ್ಪಂದ ದಂತೆ ಸೋಮವಾರ ನಾರ್ವೆಗೆ ಹಸ್ತಾಂತರಿ ಸುವ ಪ್ರಕ್ರಿಯೆ ನಡೆಸಿದೆ.

Advertisement

ಈ ಸಂಬಂಧ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ಮಧು ಎಸ್‌. ನಾಯಕ್‌, ನಾರ್ವೆಯಿಂದ ಬಂದಿದ್ದ ಆದೇಶಾನುಸಾರ ನಾವು ಕಾರ್ಗೋ ಶಿಪ್‌ ಸಿದ್ಧಪಡಿಸಿದ್ದೇವೆ. ಮಲ್ಪೆಯಲ್ಲಿ ಸಿದ್ಧವಾದ ಅತಿದೊಡ್ಡ ಕಾರ್ಗೋ ಶಿಪ್‌ ಇದು. 120 ಕೋ.ರೂ. ವೆಚ್ಚದಲ್ಲಿ ನಿರ್ಮಿಸಲಾಗಿದ್ದು, ಹಲವು ಪರಿಸರ ಸ್ನೇಹಿ ಅಂಶಗಳನ್ನು ಅಳವಡಿಸಲಾಗಿದೆ. ಈ ಹಡಗು 89.43 ಮೀಟರ್‌ ಉದ್ದ, 13.2 ಮೀಟರ್‌ ಅಗಲ ಹೊಂದಿದೆ ಎಂದರು.

ಮಲ್ಪೆಯ ಉಡುಪಿ ಕೊಚ್ಚಿನ್‌ ಶಿಪ್‌ಯಾರ್ಡ್‌ ಹಾಗೂ ಹಂಗಾರಕಟ್ಟೆ ಶಿಪ್‌ಯಾರ್ಡ್‌ನಲ್ಲಿ ಸ್ಥಳೀಯರಿಗೆ ಉದ್ಯೋಗಾವಕಾಶಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದೇವೆ. ಜಿಲ್ಲಾಡಳಿತ, ರಾಜ್ಯ ಸರಕಾರದೊಂದಿಗೆ ಮಾತುಕತೆ ನಡೆಸಿ ಇನ್ನಷ್ಟು ವಿಸ್ತರಣೆಗೂ ಕ್ರಮ ವಹಿಸಲಿದ್ದೇವೆ. ಐಟಿಐ ಆಗಿರುವ ಸ್ಥಳೀಯ ಪ್ರತಿಭೆಗಳನ್ನು ನೇಮಕ ಮಾಡಿಕೊಳ್ಳುತ್ತಿದ್ದೇವೆ ಎಂದರು.

ರಾಯಲ್‌ ನಾರ್ವೆ ರಾಯಭಾರ ಕಚೇರಿಯ ಸಚಿವರ ಸಲಹೆಗಾರ ಮತ್ತು ಯೋಜನೆಯ ಉಪಮುಖ್ಯಸ್ಥೆ ಮಾರ್ಟಿನ್‌ ಆಮ್ಡಾಲ್‌ ಬೋಥೀಮ್‌, ವಿಲ್ಸನ್‌ ಸಂಸ್ಥೆಯ ಮುಖ್ಯ ಹಣಕಾಸು ಅಧಿ ಕಾರಿ ಐನಾರ್‌ ಟೊರ್ನೇಸ್‌, ಶಿಪ್‌ ಯಾರ್ಡ್‌ ನ ತಾಂತ್ರಿಕ ನಿರ್ದೇಶಕ ಬಿಜೋಯ್‌ ಭಾಸ್ಕರ್‌, ಸಿಇಒ ಹರಿಕುಮಾರ್‌ಎ. ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next