Advertisement
ಕಡೆಕಾರು ರಕ್ಷಾ ಅವರಿಗೆ ಸೇರಿದ ಶ್ರೀ ನಾರಾಯಣ- ಐಐ ಬೋಟು ಡಿ. 12ರಂದು ರಾತ್ರಿ ಮಲ್ಪೆ ಬಂದರಿನಿಂದ ತೆರಳಿತ್ತು. ಡಿ. 19ರಂದು ಬೆಳಗ್ಗೆ 6.30ರ ವೇಳೆಗೆ ಮೀನುಗಾರಿಕೆ ನಡೆಸುವಾಗ ನೀರಿನಡಿಯಲ್ಲಿದ್ದ ಯಾವುದೋ ವಸ್ತು ಬೋಟ್ನ ತಳ ಒಡೆದು ನೀರು ನುಗ್ಗಲಾರಂಭಿಸಿತು. ತತ್ಕ್ಷಣ ಬೋಟಿನ ತಂಡೇಲ ವಯರ್ಲೆಸ್ ಮೂಲಕ ಇತರ ಬೋಟ್ಗಳಿಗೆ ಸಂದೇಶ ನೀಡಿದರು. ಶ್ರೀ ಮೂಕಾಂಬಿಕಾ ಅನುಗ್ರಹ ಬೋಟಿನವನರು ಧಾವಿಸಿ ಬಂದು ಮುಳುಗುತ್ತಿರುವ ಬೋಟನ್ನು ಮೇಲೆಳೆಯಲು ಯತ್ನಿಸಿ ದರು. ನೀರಿನ ಅಬ್ಬರ ಜಾಸ್ತಿಯಾಗಿದ್ದರಿಂದ ಪ್ರಯತ್ನ ಫಲ ನೀಡಲಿಲ್ಲ. ಸುಮಾರು 8 ಗಂಟೆ ವೇಳೆಗೆ ಬೋಟ್ ಪೂರ್ಣ ಮುಳುಗಡೆಗೊಂಡಿತು. ಅದರಲ್ಲಿದ್ದ ಮೀನುಗಾರರನ್ನು ಮೂಕಾಂಬಿಕಾ ಬೋಟಿನವರು ದಡಕ್ಕೆ ಸೇರಿಸಿದ್ದಾರೆ. ಸುಮಾರು 18 ಲ.ರೂ. ನಷ್ಟ ಅಂದಾಜಿಸಲಾಗಿದೆ.
Advertisement
Malpe: ಬೋಟ್ ಮುಳುಗಡೆ… 8 ಮಂದಿ ಮೀನುಗಾರರ ರಕ್ಷಣೆ
10:06 AM Dec 22, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.