ಮಲ್ಪೆ: ದುರಸ್ತಿಗೆಂದು 3 ಕಡೆಗಳಲ್ಲಿ ಗ್ಯಾರೇಜಿಗೆ ತಂದಿರಿಸಲಾಗಿದ್ದ ಬೋಟಿನ ಫ್ಯಾನನ್ನು ಕಳವು ಮಾಡಿರುವ ದೃಶ್ಯ ಸಿಸಿ ಕೆಮರಾದಲ್ಲಿ ಸೆರೆಯಾಗಿದೆ.
ರವಿವಾರ ರಾತ್ರಿ ಪ್ರತ್ಯೇಕವಾಗಿ ಮಲ್ಪೆಯ ಮೂರು ಗ್ಯಾರೇಜ್‌ನಲ್ಲಿ ಮೂರು ಫ್ಯಾನ್‌ಗಳು ಕಳವಾಗಿದೆ. ನಾಲ್ವರು ಯುವಕರು ಶಾಫ್ಟ್ ಸಹಿತ ಮೂರು ಫ್ಯಾನ್‌ಗಳನ್ನು ಎತ್ತಿ ತಾವು ಬಂದಿದ್ದ ಟೆಂಪೋಗೆ ಸಾಗಿಸಿಕೊಂಡು ಹೋಗುವ ದೃಶ್ಯ ಗ್ಯಾರೇಜಿನ ಕೆಮರಾದಲ್ಲಿ ಕಂಡು ಬಂದಿದೆ. ಮೂರು ಫ್ಯಾನ್‌ಗಳ ಮೌಲ್ಯ ಸುಮಾರು 4 ಲಕ್ಷ ರೂ.ಗಳೆಂದು ಅಂದಾಜಿಸಲಾಗಿದೆ.
ಗ್ಯಾರೇಜಿನ ಮುಂಭಾಗದಲ್ಲಿ ಇರಿಸಲಾಗಿದ್ದ ಫ್ಯಾನ್‌ಗಳನ್ನು ಕಳವು ಮಾಡುವ ಯೋಜನೆಯನ್ನು ಮುಂಚಿತವಾಗಿಯೇ ಹಾಕಿಕೊಂಡಿದ್ದರು. ರವಿವಾರ ಬಹುತೇಕ ಎಲ್ಲ ಅಂಗಡಿಗಳು ಬೇಗ ಮುಚ್ಚಿರುವುದರಿಂದ ಕಳವುಗೈಯಲು ಅನುಕೂಲವಾಗಿತ್ತು ಎನ್ನುತ್ತಾರೆ ಬೋಟು ಮಾಲಕರಾದ ಗಣೇಶ್ ಸುವರ್ಣ ತಿಳಿಸಿದ್ದಾರೆ.
ಸ್ಕೂಟರ್‌ನಲ್ಲಿದ್ದ ನಗದು ಕಳವು
ಮಲ್ಪೆ: ಹೊಂಡ ಆ್ಯಕ್ಟಿವಾ ಸ್ಕೂಟರಿನಲ್ಲಿ ಇರಿಸಲಾಗಿದ್ದ 50 ಸಾವಿರ ರೂ. ನಗದು ಸೋಮವಾರ ಹಾಡು ಹಗಲೇ ಕಳವಾಗಿದೆ. ಪ್ರಫುಲ್ ಎಂಬವರು ಮೀನು ಮಾರಾಟದಲ್ಲಿ ಬಂದ ನಗದು ಮೊತ್ತವನ್ನು ಸ್ಕೂಟರಲ್ಲಿ ಇರಿಸಿ ಅದನ್ನು ಮಲ್ಪೆ ಬಸ್ ನಿಲ್ದಾಣದ ಬಳಿ ಇಟ್ಟು ಹೋಗಿದ್ದರು. 10 ನಿಮಿಷದಲ್ಲಿ ಮರಳಿ ಬಂದಾಗ ಅದರಲ್ಲಿದ್ದ ಹಣವನ್ನು ಕಳ್ಳರು ಎಗರಿಸಿದ್ದಾರೆ ಎನ್ನಲಾಗಿದೆ.
Related Articles
ಇತ್ತೀಚಿನ ದಿನಗಳಲ್ಲಿ ಮಲ್ಪೆ ಮೀನುಗಾರಿಕೆ ಬಂದರಿನಲ್ಲಿ ಬೋಟಿನ ಬಿಡಿಭಾಗಗಳ ಕಳ್ಳತನ ಹೆಚ್ಚಾಗುತ್ತಿದ್ದು ಇದುವರೆಗೂ ಯಾವ ಕಳ್ಳರನ್ನು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ ಎಂದು ಮೀನುಗಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.