Advertisement
ಸ್ವಾಮಿ ವಿವೇಕಾನಂದರ 155ನೇ ಜನ್ಮ ದಿನದ ಪ್ರಯುಕ್ತ ಉಡುಪಿಯ ಸಂವೇದನಾ ಫೌಂಡೇಶನ್ ಸಂಸ್ಥೆ ಸ್ತುತಪಡಿಸಿದ ಈ ಅವಿಸ್ಮರಣೀಯ ಕಾರ್ಯಕ್ರಮದಲ್ಲಿ 23 ಕಾಲೇಜುಗಳ 5,000 ವಿದ್ಯಾರ್ಥಿಗಳು ವಂದೇ ಮಾತರಂನ 5 ಚರಣಗಳನ್ನು (ಪೂರ್ಣರೂಪ) 6 ನಿಮಿಷ ಏಕಕಾಲದಲ್ಲಿ ಹಾಡಿ ದಾಖಲೆ ಬರೆದರು.
ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್‌ನ ಪ್ರವರ್ತಕ ಡಾ| ಜಿ. ಶಂಕರ್ ಅವರು ಸಂವೇದನಾ ಫೌಂಡೇಶನಿನ ಲಾಂಛನವನ್ನು ಬಲೂನ್ ಮೂಲಕ ಮೇಲೆ ಹಾರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಯುವಕ ಮತ್ತು ಯುವತಿಯರು ಸಶಕ್ತೀಕರಣದತ್ತ ಹೆಜ್ಜೆ ಹಾಕಿ ದೇಶಭಕ್ತಿ ಮೈಗೂಡಿಸಿಕೊಳ್ಳಬೇಕು. ಸಂವೇದನ ಸಂಸ್ಥೆಯ ಈ ಯುವ ತಂಡ ಒಳ್ಳೆಯ ಮಾರ್ಗದಲ್ಲಿ ನಡೆದು ಭವ್ಯ ಭಾರತ ನಿರ್ಮಾಣ ಮಾಡುವಲ್ಲಿ ಮುಂದಾಗಬೇಕು ಎಂದು ಅವರು ಶುಭ ಹಾರೈಸಿದರು.
ಅಧ್ಯಕ್ಷತೆ ವಹಿಸಿದ್ದ ಸಚಿವ ಪ್ರಮೋದ್ ಮಧ್ವರಾಜ್ ಮಾತನಾಡಿ, ಸ್ವಾಮಿ ವಿವೇಕಾನಂದರ ಜನ್ಮದಿನಾಚರಣೆ ಈ ಕಾರ್ಯಕ್ರಮದಿಂದ ಜಗತ್ತಿಗೆ ಸಂದೇಶವನ್ನು ಸಾರುವ ಕೆಲಸ ಆಗಿದೆ. ವಿವೇಕಾನಂದರ ಸ್ಫೂರ್ತಿಯಿಂದ ದೇಶವನ್ನು ಕಟ್ಟುವ ಕೆಲಸದಲ್ಲಿ ನಾವೆಲ್ಲರೂ ಒಂದಾಗಿ ನಮ್ಮನ್ನು ತೊಡಗಿಸಿಕೊಳ್ಳುವಂತಾಗಲಿ ಎಂದರು.
Related Articles
Advertisement
ಆಕರ್ಷಕ ಶೋಭಾಯಾತ್ರೆಸಭಾ ಕಾರ್ಯಕ್ರಮಕ್ಕೆ ಮೊದಲು ಮಲ್ಪೆ ಗಾಂಧಿ ಶತಾಬ್ದ ಮೈದಾನದಿಂದ ಮಲ್ಪೆ ಬಸ್ ನಿಲ್ದಾಣದ ಮೂಲಕ ಮಲ್ಪೆ ಬೀಚ್‌ವರೆಗೆ ಬೃಹತ್ ಶೋಭಾಯಾತ್ರೆ ನಡೆಯಿತು. ಆಂಧ್ರಪ್ರದೇಶದ ಸಹಾರಾ ರೇಡಿಯನ್ಸ್ ಸೊಸೈಟಿ ತಯಾರಿಸಿದ ಸುಮಾರು 1750 ಅಡಿ ಉದ್ದ 9 ಅಡಿ ಅಗಲದ ತಿರಂಗ ಧ್ವಜದ ಜತೆಗೆ ವಿದ್ಯಾರ್ಥಿಗಳು, ಗಾಯಕರು ಹೆಜ್ಜೆ ಹಾಕಿದರು. ವಿವಿಧ ಭಜನ ಮಂದಿರ, ಸಂಘ ಸಂಸ್ಥೆಗಳ ಸದಸ್ಯರು ಬೃಹತ್ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ದೇಶ ಭಕ್ತಿ, ರಾಷ್ಟ್ರ ಜಾಗೃತಿ ಸಂದೇಶ ಸಾರುವ ವಿವಿಧ ಟ್ಯಾಬ್ಲೊಗಳ, ಚೆಂಡೆ ಕುಣಿತ, ಬ್ಯಾಂಜಿಯೋ ಶೋಭಾಯಾತ್ರೆಗೆ ಮೆರುಗನ್ನು ನೀಡಿತು. ಅರುಣ್ ಕಲ್ಯಾಣಪುರ ಸ್ವಾಗತಿಸಿದರು. ಸಂವೇದನ ಫೌಂಡೇಶನಿನ ಪ್ರಕಾಶ್ ಮಲ್ಪೆ ಮತ್ತು ಪ್ರಶಾಂತ್ ತಿಂಗಳಾಯ ಪ್ರಸ್ತಾವನೆಗೈದರು.ದಾಮೋದರ ಮತ್ತು ಸೌಜನ್ಯಾ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು. ನಿಖೀಲ್ ಸಾಲ್ಯಾನ್ ವಂದಿಸಿದರು. ವಂದೇ ಮಾತರಂ ವಿಶ್ವದಾಖಲೆ
ಉಡುಪಿ ಒಂದು ಐತಿಹಾಸಿಕ ದಾಖಲೆಗೆ ಕಾರಣವಾಗಿದೆ, ಸಾವಿರಾರು ವಿದ್ಯಾರ್ಥಿಗಳು ಬ್ಯಾಡ್ಜ್ ತೊಟ್ಟು ವಂದೇ
ಮಾತರಂ ಗೀತೆ ಹಾಡಿದ್ದಾರೆ. ಹಿಂದೆಂದು ಈ ರೀತಿ ದೊಡ್ಡ ಮಟ್ಟದ, ವ್ಯವಸ್ಥಿತ ಗಾಯನ ಕಾರ್ಯಕ್ರಮ ನಡೆದಿರಲಿಲ್ಲ.
– ಸಂತೋಷ್ ಅಗರ್‌ವಾಲ್, ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ನ ವ್ಯವಸ್ಥಾಪಕ