Advertisement
ಹೊರ ಜಿಲ್ಲೆಯ, ಹೆಚ್ಚಾಗಿ ಉತ್ತರ ಕರ್ನಾಟಕದ ಪ್ರವಾಸಿಗರು ಸೇರಿದಂತೆ ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದರು. ಬೀಚ್‌ಗೆ ಶನಿವಾರ ಮತ್ತು ರವಿವಾರ ಬೆಳಗ್ಗಿನಿಂದ ಪ್ರವಾಸಿಗರ ದಂಡೇ ಹರಿದು ಬಂದಿತ್ತು. ಪಾರ್ಕಿಂಗ್ ಏರಿಯಾ ಮತ್ತು ರಸ್ತೆ ಬದಿಯಲ್ಲಿ ವಾಹನಗಳ ಸಾಲು ಕಂಡು ಬಂದಿದೆ. ಮುಖ್ಯ ಬೀಚ್‌ನಲ್ಲಿ ಒಂದು ಕಿ.ಮೀ ಉದ್ದಕ್ಕೆ ನೆಟ್ ಅಳವಡಿಸಲಾಗಿದ್ದು, ಆಗಮಿಸಿದ ಜನರು ದೂರದಲ್ಲೇ ನಿಂತು ಸಮುದ್ರವನ್ನು ವೀಕ್ಷಿಸಿದರು. ಮಳೆಗಾಲದಲ್ಲಿ ಸಮುದ್ರ ಪ್ರಕ್ಷುಬ್ಧ ವಾಗಿರುವ ಹಿನ್ನೆಲೆ ಯಲ್ಲಿ ಪ್ರವಾಸಿಗರು ನೀರಿಗಿಳಿಯ ದಂತೆ 6 ಅಡಿ ಎತ್ತರಕ್ಕೆ ನೆಟ್ ಅಳ ವಡಿಸಲಾಗಿದೆ.
ಬೀಚ್‌ನ ಉತ್ತರ ಮತ್ತು ದಕ್ಷಿಣ ಭಾಗದಲ್ಲಿ ಪ್ರವಾಸಿಗರು ಜೀವ ರಕ್ಷಕರ ಕಣ್ಣು ತಪ್ಪಿಸಿ ನೀರಿಗಿಳಿದು ಆಟವಾಡುತ್ತಿರುವುದು ಕಂಡು ಬಂದಿದೆ. ಮುಖ್ಯ ಬೀಚ್‌ನಲ್ಲಿ ನೆಟ್ ಅಳ ವಡಿಸಿದೆ ಎಂದು ಹೆಚ್ಚಿನ ಪ್ರವಾಸಿ ಗರು ಉತ್ತರ ದಿಕ್ಕು ತೊಟ್ಟಂ ಫುರ್ಟಾಡೋ ಗೆಸ್ಟ್ ಹೌಸ್ ಸಮೀಪ ಹಾಗೂ ದಕ್ಷಿಣ ಭಾಗದ ಕೊಳ ಹನುಮಾನ್ ನಗರದ ಸಮುದ್ರ ತೀರದಲ್ಲಿ ನೀರಿಗಿಳಿದು ಆಟವಾಡುತ್ತಿದ್ದರು. ಜೀವ ರಕ್ಷಕರು ನೀರಿಗಿಳಿದವರನ್ನು ಓಡಿಸುತ್ತಿದ್ದರೂ ಅವರು ಕ್ಯಾರೇ ಎನ್ನದೆ ಮತ್ತೊಂದು ಕಡೆಯಲ್ಲಿ ಪ್ರತ್ಯಕ್ಷ ವಾಗು ತ್ತಿದ್ದರು. ಪೊಲೀಸರ ಮಾತನ್ನು ಕೂಡ ಕೇಳುತ್ತಿರಲಿಲ್ಲ. ರವಿವಾರ ಬೆಳಗ್ಗಿನಿಂದ ಇಲ್ಲಿನ ಜೀವರಕ್ಷಕ ಸಿಬಂದಿಗೆ ಪ್ರವಾಸಿಗರನ್ನು ನೀರಿಗಿಳಿಯದಂತೆ ತಡೆಯುವುದೇ ಬಹುದೊಡ್ಡ ಸಾಹಸ ವಾಗಿತ್ತು. ಬೀಚ್‌ನಲ್ಲಿ ಈಗ ಯಾವುದೇ ವಾಟರ್ ಸ್ಪೋರ್ಟ್ಸ್ ಇಲ್ಲ. ದೂರ ದಿಂದ ಬಂದ ಪ್ರವಾಸಿಗರು ಎಷ್ಟೇ ಎಚ್ಚರಿಕೆ ನೀಡಿದರೂ ಬೇರೆ ಭಾಗದಲ್ಲಿ ನೀರಿಗೆ ಇಳಿದು ಅಪಾಯವನ್ನು ತಂದುಕೊಳ್ಳುತ್ತಾರೆ. ಪ್ರಸ್ತುತ ಸಮುದ್ರದ ಅಲೆಗಳ ಅಬ್ಬರವೂ ಜೋರಾಗಿದೆ ಎಂದು ಬೀಚ್ ನಿರ್ವಾಹಕರಾದ ಸುದೇಶ್ ಶೆಟ್ಟಿ ತಿಳಿಸಿದ್ದಾರೆ.
Related Articles
Advertisement