Advertisement
ಜಿಲ್ಲಾಡಳಿತ, ಮಲ್ಪೆ ಅಭಿವೃದ್ಧಿ ಸಮಿತಿ, ಪ್ರವಾಸೋದ್ಯಮ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರಸಭೆ, ಕ್ರೀಡಾ ಇಲಾಖೆ, ನಿರ್ಮಿತಿ ಕೇಂದ್ರ, ಪಶುಪಾಲನ ಇಲಾಖೆ, ಕರಾವಳಿ ಪ್ರವಾಸೋದ್ಯಮ ಸಂಘಟನೆ ಹಾಗೂ ಸ್ಥಳೀಯ ಭಜನ ಮಂದಿರಗಳ ಸಹಯೋಗದೊಂದಿಗೆ ಈ ಉತ್ಸವ ನಡೆದಿದ್ದು ಗರಿಷ್ಠ ಸಂಖ್ಯೆಯ ಜನರನ್ನು ಆಕರ್ಷಿಸಿದೆ. ರಜಾ ದಿನವಾದ್ದರಿಂದ ಕುಟುಂಬ ಸಮೇತರಾಗಿ ಜನ ಆಗಮಿಸಿದ್ದರು.
Related Articles
ಬೀಚ್‌ನಲ್ಲಿ ವಿವಿಧ ಆಹಾರ ಮಳಿಗೆಗಳನ್ನು ತೆರೆಯಲಾಗಿತ್ತು. ಚಿಕನ್ ಬಿರಿಯಾನಿ, ಚಿಕನ್ ಫ್ರೈಡ್‌ರೈಸ್, ಎಗ್ ಫ್ರೈಡ್‌ರೈಸ್, ವಡಪಾವ್, ಚಿಲ್ಲಿ ಪಕೋಡ, ಗೋಬಿ ನೂಡಲ್ಸ್ ಹೀಗೆ ಬಗೆ ಬಗೆಯ ಖಾದ್ಯಗಳಿದ್ದವು. ಮೀನು ಪ್ರಿಯರಿಗಾಗಿಯೇ ಇದ್ದ ಖಾದ್ಯಗಳಿಗೂ ಜನ ಮುಗಿ ಬುದ್ದರು. ಮೀನಿನ ಮಸಾಲೆ, ಗುಡಿಕೈಗಾರಿಕೆ, ದೇಶಿಯ ತಂಪು ಪಾನೀಯಗಳ ಸ್ಟಾಲ್‌ಗಳಿಗೂ ಉತ್ತಮ ಸ್ಪಂದನೆ ಇತ್ತು.ಶನಿವಾರದಂದು ಅವಿಭಜಿತ ಪುರು ಷರ ಹೊನಲು ಬೆಳಕಿನ ಪ್ರೊ. ಕಬಡ್ಡಿ ಪಂದ್ಯಾವಳಿ ರೋಮಾಂಚಕಾರಿಯಾಗಿ ನಡೆದಿತ್ತು. ರವಿವಾರ ಬೆಳಗ್ಗೆ ಪುರುಷರಿಗಾಗಿ ವಾಲಿಬಾಲ್, ಮಹಿಳೆಯರಿಗೆ ತ್ರೋಬಾಲ್ ಪಂದ್ಯಾಟಗಳು ಜರಗಿತು. ಶಾಲಾ ಕಾಲೇಜು ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆಯನ್ನು ಸುಮಾರು 200ಕ್ಕೂ ಅಧಿಕ ಸ್ಪರ್ಧಿಗಳು ಪಾಲ್ಗೊಂಡಿದ್ದರು.
Advertisement
ದಿನಗಳುಹೆಚ್ಚಳವಾಗಲಿಬೀಚ್ ಉತ್ಸವಗಳು ಕೇವಲ ಒಂದೆರಡು ದಿನದಲ್ಲಿ ಮುಗಿದು ಹೋಗಬಾರದು. ಕನಿಷ್ಠ ಒಂದು ವಾರವಾದರೂ ಇರಬೇಕು. ಆಕರ್ಷಕ ಗಾಳಿಪಟ ಪ್ರದರ್ಶನ, ಶ್ವಾನ ಪ್ರದರ್ಶನ ತುಂಬ ಖುಷಿ ಕೊಟಿತು. ಇನ್ನಷ್ಟು ಸ್ಪರ್ಧೆಗಳು ಇದ್ದರೆ ಚೆನ್ನಾಗಿತ್ತು.
-ಶ್ವೇತಾ ಶೆಟ್ಟಿ, ಕಾಲೇಜು ವಿದ್ಯಾರ್ಥಿ ಚಿತ್ತಾಕರ್ಷಕ ಕಲಾಕೃತಿಗಳು
ಜಿಲ್ಲೆಯ ಪ್ರವಾಸಿ ತಾಣ, ಸ್ವತ್ಛ ಭಾರತ್ ಮತ್ತು ಕರಾವಳಿಯ ಸಂಸ್ಕೃತಿ ಬಿಂಬಿಸುವ ಮರಳುಶಿಲ್ಪ ಸ್ಪರ್ಧೆಯನ್ನು ನಡೆಸಲಾಗಿದ್ದು ಸುಮಾರು 15ತಂಡಗಳು ಭಾಗವಹಿಸಿದ್ದವು. ಒಂದನ್ನೊಂದು ಮೀರಿಸುವಂತೆ ಕಲಾಕೃತಿಗಳು ಮೂಡಿಬಂದಿದ್ದವು. ಬಾನೆತ್ತರದಲ್ಲಿ ಬಣ್ಣ ಬಣ್ಣದ ಗಾಳಿಪಟಗಳು ಗಿರಕಿ ಹೊಡೆಯುತ್ತಿದ್ದವು. ಮನಸೆಳೆದ ಶ್ವಾನ ಪ್ರದರ್ಶನ
ಇತ್ತ ಶ್ವಾನ ಸಾಮ್ರಾಜ್ಯವೇ ನಿರ್ಮಾಣವಾಗಿತ್ತು. ವಿವಿಧ ಕಡೆಗಳಿಂದ ಬಂದ ಸ್ವದೇಶಿ-ವಿದೇಶಿ ಶ್ವಾನ ತಳಿಗಳು ಪ್ರೇಕ್ಷಕರ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದವು. ಮಧೋಳ್‌ನಿಂದ ಹಿಡಿದು ವಿದೇಶದಿಂದ ಆಮದು ಮಾಡಿದ ನೆಪೊಲಿಯನ್ ಮಸ್ತಿಫ್ ನಾಯಿಗಳು ಗಮನ ಸೆಳೆದವು.