Advertisement

ಮಲ್ಪೆ ಬೀಚ್‌ ಉತ್ಸವಕ್ಕೆ ವೇದಿಕೆ ಸಜ್ಜು : ಸಾಂಸ್ಕೃತಿಕ ರಸದೌತಣ

01:16 AM Feb 01, 2020 | Sriram |

ಮಲ್ಪೆ: ಇಲ್ಲಿನ ಕಡಲ ಕಿನಾರೆಯಲ್ಲಿ ಫೆ.1ಮತ್ತು 2ರಂದು ನಡೆಯಲಿರುವ ಬೀಚ್‌ ಉತ್ಸವಕ್ಕೆ ಭರದ ಸಿದ್ಧತೆ ನಡೆದಿದೆ. ವಿವಿಧ ಸ್ಪರ್ಧೆಗಳು, ಜಲಸಾಹಸ ಕ್ರೀಡೆ, ಆಹಾರೋತ್ಸವ, ವೈನ್‌ ಮೇಳ, ಮರಳು ಶಿಲ್ಪ, ಗಾಳಿಪಟ ಕಾರ್ಯ ಕ್ರಮಗಳು ನಡೆಯಲಿವೆ. ಸರಕಾರದ ವಿವಿಧ ಇಲಾಖೆಗಳು, ಸಂಘಸಂಸ್ಥೆಗಳು ಈ ಕಾರ್ಯಕ್ರಮ ಆಯೋಜಿಸುತ್ತಿವೆ.

Advertisement

ಮಳಿಗೆಗಳು
ಕರಕುಶಲ ವಸ್ತುಗಳು ಸೇರಿದಂತೆ ಆಹಾರ, ಪ್ರದರ್ಶನ ಮತ್ತು ಮಾರಾಟದ 20 ಮಳಿಗೆಗಳನ್ನು ತೆರೆಯಲಾಗುತ್ತದೆ. ದೇಶೀಯ ಮತ್ತು ಅಂತಾರಾಷ್ಟ್ರೀಯ 10 ಕಂಪೆನಿಗಳ 5 ವೈನ್‌ ಕೌಂಟರ್‌ಗಳು, ಪ್ರತಿಷ್ಠಿತ ಹೊಟೇಲ್‌ಗ‌ಳ ಸಸ್ಯಾಹಾರ ಮತ್ತು ಮಾಂಸಾಹಾರದ 5 ಕೌಂಟರ್‌, ವಿಶೇಷ ಭದ್ರತೆ ಕೈಗೊಳ್ಳಲಾಗಿದ್ದು ಸಿಸಿ ಕೆಮರಾ ಅಳವಡಿಸಲಾಗಿದೆ. ಸುಮಾರು 4 ಸಾವಿರ ಮಂದಿಗೆ ಆಸನದ ವ್ಯವಸ್ಥೆ ಮಾಡಲಾಗಿದೆ.ಫೆ. 1ರಂದು ಮಧ್ಯಾಹ್ನ 2ರಿಂದ ರಾತ್ರಿ 11ರವರೆಗೆ ಪುರುಷರ ಹೊನಲು ಬೆಳಕಿನ ಪ್ರೊ. ಕಬಡ್ಡಿ ಪಂದ್ಯಾವಳಿ ನಡೆಯಲಿದೆ. ಫೆ. 2ರಂದು ಬೆಳಗ್ಗೆ 9 ರಿಂದ ಪುರುಷರಿಗಾಗಿ ವಾಲಿಬಾಲ್‌, ಮಹಿಳೆಯರಿಗೆ ತ್ರೋಬಾಲ್‌ ಪಂದ್ಯಾಟಗಳು ನಡೆಯಲಿವೆ. 10 ಗಂಟೆಗೆ ಮರಳುಶಿಲ್ಪ ಸ್ಪರ್ಧೆ, ಜಲಸಾಹಸ ಕ್ರೀಡೆಗಳು ನಡೆಯಲಿವೆ. ಚಿತ್ರಕಲೆ ಸ್ಪರ್ಧೆಯು ಪ್ರಾಥಮಿಕ, ಪ್ರೌಢಶಾಲಾ ಮತ್ತು ಕಾಲೇಜು ಒಟ್ಟು ಮೂರು ವಿಭಾಗದಲ್ಲಿ ನಡೆಯಲಿದೆ.

ಮಧ್ಯಾಹ್ನ 3ರಿಂದ ಗಾಳಿಪಟ ಪ್ರದರ್ಶನ, ಶ್ವಾನ ಪ್ರದರ್ಶನ ಮತ್ತು ಸ್ಪರ್ಧೆ ನಡೆಯಲಿರುವುದು. ಈಗಾಗಲೇ 200 ಶ್ವಾನಗಳು ಪ್ರದರ್ಶನಕ್ಕೆ ನೋಂದಣಿಯಾಗಿವೆ.

ಪಾರ್ಕಿಂಗ್‌ ವ್ಯವಸ್ಥೆ
ವಾಹನಗಳನ್ನು ಪಾರ್ಕ್‌ ಮಾಡಲು ಈಗಿರುವ ಪಾರ್ಕಿಂಗ್‌ ಸ್ಥಳವನ್ನು ಹೊರತುಪಡಿಸಿ, ವಡಭಾಂಡೇಶ್ವರ ಗಾಂಧಿ ಶತಾಬ್ದಿ ಮೈದಾನ, ಬೀಚ್‌ ಬಳಿಯ ರಾಯಲ್‌ ಆರ್ಕಿಡ್‌ ಮೈದಾನದಲ್ಲಿ ಹೆಚ್ಚುವರಿ ವಾಹನಗಳಿಗೆ ವ್ಯವಸ್ಥೆಯನ್ನು ಮಾಡಲಾಗಿದೆ.

ಸಾಸ್ಕೃತಿಕ ಕಾರ್ಯಕ್ರಮಗಳು
ಫೆ. 1ರಂದು ಸಂಜೆ 5-30ರಿಂದ ಜಿಲ್ಲೆಯ ಹೆಸರಾಂತ ಕಲಾವಿದರ ತಂಡ ಮತ್ತು ಶಿರಸಿ ಅಂಜಲಿ ವಿಲ್ಸನ್‌ ಡ್ಯಾನ್ಸ್‌ ಟ್ರೂಪ್‌ ತಂಡದಿಂದ ನೃತ್ಯ. ಫೆ. 2ರಂದು ಸಂಜೆ 4ರಿಂದ ರಾತ್ರಿ 10-30ರವರೆಗೆ ಹೆಸರಾಂತ ಕಲಾವಿದರಿಂದ, ಕಲರ್ಸ್‌ ಕನ್ನಡ ವಾಹಿನಿಯ ಕನ್ನಡ ಕೋಗಿಲೆ ಖ್ಯಾತಿಯ ಹೆಸರಾಂತ ಕಲಾವಿದರಿಂದ ಸಂಗೀತ ರಸಮಂಜರಿ ಹಾಗೂ ಜೀ ಕನ್ನಡ ವಾಹಿನಿಯ ಡ್ಯಾನ್ಸ್‌ ಕರ್ನಾಟಕ ಡ್ಯಾನ್ಸ್‌ನ ಕಲಾವಿದರಿಂದ ಕಾರ್ಯಕ್ರಮ ನಡೆಯಲಿದೆ.

Advertisement

ಫೆ.1 ಸಂಜೆ 5-30ಕ್ಕೆ ಉದ್ಘಾಟನೆ
ಫೆ. 1ರಂದು ಸಂಜೆ 5-30ಕ್ಕೆ ಉಡುಪಿ ಶಾಸಕ ರಘುಪತಿ ಭಟ್‌ ಅಧ್ಯಕ್ಷತೆಯಲ್ಲಿ ರಾಜ್ಯ ಗೃಹ ಸಚಿವ ಬಸವರಾಜ್‌ ಬೊಮ್ಮಾಯಿ ಅವರು ಬೀಚ್‌ ಉತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಮೀನುಗಾರಿಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಪ್ರವಾಸೋದ್ಯಮ ಸಚಿವ ಸಿ. ಟಿ. ರವಿ, ಸಂಸದೆ ಶೋಭಾ ಕರಂದ್ಲಾಜೆ, ಗಣ್ಯರು ಪಾಲ್ಗೊಳ್ಳಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next