Advertisement

Malpe Beach: ಪ್ರವಾಸಿಗರ ನಡುವೆ ಘರ್ಷಣೆ

12:03 AM Dec 15, 2023 | Team Udayavani |

ಮಲ್ಪೆ: ಮಲ್ಪೆ ಬೀಚ್‌ಗೆ ಬಂದಿದ್ದ ಪ್ರವಾಸಿಗರ ಎರಡು ಗುಂಪುಗಳ ನಡುವೆ ಡಿ.13ರ ಸಂಜೆ ಘರ್ಷಣೆ ನಡೆದಿದ್ದು, ಇದು ಬೀಚ್‌ನಲ್ಲಿರುವ ಸಿಸಿಟಿವಿಯಲ್ಲಿ ದಾಖಲಾಗಿದೆ. ಎರಡು ಗುಂಪುಗಳು ಹೊಡೆದಾಡಿಕೊಂಡು ಬಳಿಕ ಅಲ್ಲಿಂದ ತೆರಳಿವೆ. ಅವರ ಮಾತಿನ ಶೈಲಿ ಉತ್ತರ ಕರ್ನಾಟಕದವರಂತಿದೆ. ಸಿಸಿಟಿವಿ ಪುಟೇಜ್‌ನ ಆಧಾರದಲ್ಲಿ ಬೀಚ್‌ನ ಹೋಮ್‌ ಗಾರ್ಡ್‌ ಡಿ. 14ರಂದು ಬೆಳಗ್ಗೆ ಮಲ್ಪೆ ಠಾಣೆಗೆ ದೂರು ನೀಡಿದ್ದಾರೆ.

Advertisement

ಯಾರು ಗಲಾಟೆ ಮಾಡಿದ್ದಾರೆ ಎಂದು ಪತ್ತೆಯಾಗಿಲ್ಲ. ಮುಂದೆ ಈ ಬಗ್ಗೆ ತನಿಖೆ ನಡೆಸಿ ಆರೋಪಿಗಳನ್ನು ಪತ್ತೆ ಹಚ್ಚಿ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ| ಕೆ. ಆರುಣ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next