ಅವರು ಮಲ್ಪೆಯ ಜೈಮಾತಾ ಬೋಟಿನಲ್ಲಿ ಕಲಾಸಿಯಾಗಿ ಕೆಲಸ ಮಾಡಿಕೊಂಡಿದ್ದರು. ಮೀನುಗಾರಿಕೆ ಕೆಲಸ ಮುಗಿಸಿ ಬೋಟನ್ನು ದಕ್ಕೆಯಲ್ಲಿ ನಿಲ್ಲಿಸಿ ರಾತ್ರಿ ಊಟ ಮಾಡಿ ವಾಪಸು ಅದೇ ಬೋಟಿನಲ್ಲಿ ಮಲಗಿದ್ದರು. ರಾತ್ರಿ 10.45ರ ವೇಳೆಗೆ ಬಹಿರ್ದೆಸೆಗೆಂದು ಹೋಗುವಾಗ ನೀರಿಗೆ ಬಿದ್ದಿದ್ದರು.
Advertisement
ನೀರಿಗೆ ಬಿದ್ದ ಶಬ್ದ ಕೇಳಿ ಬೋಟಿನಲ್ಲಿ ಮಲಗಿದ್ದ ಬಾಬುಜಿ ಮತ್ತು ಮುರಗೇಶ ಎಚ್ಚರಗೊಂಡು ನಾಗಸ್ವಾಮಿಯ ರಕ್ಷಣೆಗೆ ಧಾವಿಸಿದ್ದು, ಬೋಟಿನಿಂದ ಹಗ್ಗವನ್ನು ನೀರಿಗೆ ಎಸೆದಿದ್ದಾರೆ. ಆದರೆ, ನಾಗಸ್ವಾಮಿ ಮದ್ಯ ಸೇವನೆ ಮಾಡಿದ್ದರಿಂದ ಹಗ್ಗವನ್ನು ಹಿಡಿಯಲು ಸಾಧ್ಯವಾಗದೇ ನೀರಿನಲ್ಲಿ ಮುಳುಗಡೆಯಾಗಿದ್ದರು.