Advertisement

Malpe: ಅರ್ಧ ತಡೆಗೋಡೆ ಇಲ್ಲದೆ ಸೇತುವೆ ಅಪಾಯಕಾರಿ

04:43 PM Sep 12, 2024 | Team Udayavani |

ಮಲ್ಪೆ: ಕೊಡಂಕೂರು ವಾರ್ಡ್‌ ತೋಟದಮನೆ ಶಿರ್ಡಿ ಸಾಯಿಬಾಬ ಮಂದಿರದ ಸಮೀಪವಿರುವ ಇಂದ್ರಾಣಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆಯಲ್ಲಿ ಅರ್ಧ ತಡೆಗೋಡೆ ಇರುವ ವಾಹನ ಸವಾರರು ಆತಂಕದಲ್ಲಿಯೇ ಸಂಚಾರ ಮಾಡುವಂತಹ ಪರಿಸ್ಥಿತಿ ಬಂದಿದೆ.

Advertisement

ಸಣ್ಣ ಸೇತುವೆ ಆಗಿದ್ದರೂ ಕೂಡ ಈ ರಸ್ತೆಯ ತಿರುವಿನಲ್ಲಿ ಅರ್ಧಕ್ಕೆ ತಡೆಗೋಡೆ ಇಲ್ಲದಿರುವುದರಿಂದ ಅಪಾಯಕಾರಿ ಸಂಗತಿಯಾಗಿದೆ ಎನ್ನಬಹುದು. ಆದರೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಮಾತ್ರ ಇದಕ್ಕೂ ತಮಗೂ ಯಾವುದೇ ರೀತಿಯಿಂದ ಸಂಬಂಧವೇ ಇಲ್ಲ ಎಂಬಂತೆ ವರ್ತಿಸುತ್ತಿರುವುದು ಮಾತ್ರ ಪ್ರಯಾಣಿಕರಿಗೆ ತೀವ್ರ ಆಕ್ರೋಶ ಮೂಡುವಂತಾಗಿದೆ.

ನಿತ್ಯ ಈ ಸೇತುವೆ ಮೂಲಕ ನೂರಾರು ವಾಹನಗಳು ತೆರಳುತ್ತವೆ ಆದರೂ ಅವರು ತಡೆಗೋಡೆ ನಿರ್ಮಾಣ ಮಾಡಲು ಮಾತ್ರ ಆಸಕ್ತಿ ತೋರಿಸುತ್ತಿಲ್ಲ ಏಕೆ ಎಂಬ ಪ್ರಶ್ನೆ ಪ್ರಯಾಣಿಕರಲ್ಲಿ ಕಾಡಲಾರಂಭಿಸಿದೆ. ಕಾರು ಸಹಿತ ಬೈಕ್‌ ಸವಾರರು ವೇಗವಾಗಿ ಹೋಗುವಾಗ ಒಂದು ವೇಳೆ ಏನಾದರೂ ಆಯ ತಪ್ಪಿದರೆ ನೇರವಾಗಿ ಹಳ್ಳದೊಳಗೆ ಬೀಳಬೇಕಾಗುತ್ತದೆ. ಹೀಗಾಗಿ ಜೀವ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಳವಾಗುತ್ತದೆ. ಅಮಾಯಕರು ಜೀವ ಕಳೆದುಕೊಳ್ಳುವ ಮುಂಚಿತವಾಗಿಯೇ ಎಚ್ಚೆತ್ತುಕೊಳ್ಳುವುದು ಅತ್ಯವಶ್ಯವಿದೆ ಎನ್ನಬಹುದು. ಈ ಸೇತುವೆ ರಸ್ತೆ ಕೂಡ ಸಾಕಷ್ಟು ಪ್ರಮಾಣದಲ್ಲಿ ತಗ್ಗು ದಿನ್ನೆಗಳಿಂದ ಕೂಡಿದೆ. ಆದರೂ ಕೂಡ ದುರಸ್ಥಿ ಭಾಗ್ಯ ಕಂಡಿಲ್ಲ ಎಂಬುದು ಈ ಪ್ರದೇಶದ ವಾಹನ ಸವಾರರ ಗಂಭೀರ ಆರೋಪವಾಗಿದೆ.

ಯಾವ ಸ್ಪಂದನೆಯೂ ಇಲ್ಲ
ಈ ಭಾಗದಲ್ಲಿ ಎರಡು ವಾಹನಗಳು ಎದುರು ಬದರು ಆದಾಗ ಬದಿಗೆ ಸರಿದರೆ ಅನಾಹುತ ತಂದು ಕೊಳ್ಳಬೇಕಾಗುತ್ತದೆ. ಈಗಾಗಲೇ ಇಲ್ಲಿ ಕಾರು, ಬೈಕು ಸವಾರರು ಆಯತಪ್ಪಿ ಹೊಳೆಗೆ ಬಿದ್ದಿದ್ದಾರೆ. ಸೇತುವೆ ತಡೆಗೋಡೆ ನಿರ್ಮಾಣ ಮಾಡಬೇಕೆಂದು ಹಲವಾರು ಬಾರಿ ಮನವಿ ಮಾಡಿದರೂ ಯಾವ ಸ್ಪಂದನೆಯೂ ಇಲ್ಲ.
-ತೋಟದಮನೆ ದಿವಾಕರ ಶೆಟ್ಟಿ, ಶಿರ್ಡಿ ಸಾಯಿಬಾಬಾ ಮಂದಿರ

ಅನುದಾನ ಬಿಡುಗಡೆಯಾಗಿದೆ
ಸೇತುವೆಯ ಎರಡೂ ಬದಿ 10 ಮೀಟರ್‌ ಅಂತರದಲ್ಲಿ ತಡೆಗೋಡೆ ನಿರ್ಮಾಣಕ್ಕೆ ನಗರೋತ್ಥಾನದಡಿ ವರ್ಷದ ಹಿಂದೆ ಅನುದಾನ ಬಿಡುಗಡೆಯಾಗಿದೆ. ಟೆಂಡರ್‌ ಪ್ರಕ್ರಿಯೆಯೂ ಆಗಿದೆ. ಆದರೆ ಕಾಮಗಾರಿ ವಹಿಸಿಕೊಂಡ ಗುತ್ತಿಗೆದಾರರು ವಿಳಂಬಿಸುತ್ತಿದ್ದಾರೆ. ಈ ಬಗ್ಗೆ ಮತ್ತೆ ಒತ್ತಡ ತರಲಾಗುವುದು.
– ಸಂಪಾವತಿ, ನಗರಸಭಾ ಸದಸ್ಯರು ಕೊಡಂಕೂರು ವಾರ್ಡ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next